ಮಂಗಳೂರು: ಜನಪ್ರಿಯತೆ, ಗುಣಮಟ್ಟ, ಗಳಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ದಾಖಲೆ ಬರೆದು ತುಳು ಸಿನಿಮಾ ರಂಗದಲ್ಲಿಯೇ ಹೊಸ ಸಂಚಲನ ಮೂಡಿಸುತ್ತಿರುವ ಚಾಲಿ ಪೋಲಿಲು ಸಿನಿಮಾ ಈಗ ಮತ್ತೊಂದು ದಾಖಲೆ ಬರೆಯಲು ವೇದಿಕೆ ಸಿದ್ಧಗೊಂಡಿದೆ. ನ. 21 (ಶುಕ್ರವಾರ)ರಿಂದ ಚಾಲಿಪೋಲಿಲು ಸಿನಿಮಾ ಶಿವಮೊಗ್ಗದಲ್ಲಿ ಪ್ರದರ್ಶನ ಆರಂಭಿಸುವ ಮೂಲಕ ಅಲ್ಲಿನ ಜನ ರಿಗೆ ಮನೋರಂಜನೆ ನೀಡಲಿದೆ. ಆ ಮೂಲಕ ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದು ಶಿವಮೊಗ್ಗ ದಲ್ಲಿ ಪ್ರದರ್ಶನ ನೀಡಿದ ಖ್ಯಾತಿಗೆ ಚಾಲಿಪೋಲಿಲು ಭಾಜನವಾಗಲಿದೆ.
ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಕೆ. ಪಾಂಡೇಶ್ವರ ನಿಮರ್ಾಣದ ಚಾಲಿಪೋಲಿಲು ತುಳು ಸಿನಿಮಾ ಬಹು ಜನರ ಅಪೇಕ್ಷೆ ಮತ್ತು ಬೇಡಿಕೆ ಮೇರೆಗೆ ನ. 14ರಿಂದ ಪುತ್ತೂರಿನಲ್ಲಿ ನ.21ರಿಂದ ಶಿವಮೊಗ್ಗ, ಭದ್ರಾವತಿ ಬೆಂಗಳೂರುಗಳಲ್ಲಿ ಪ್ರದರ್ಶನ ಕಾಣಲಿದೆ. ಆ ಬಳಿಕ ಕಾಸರಗೋಡು, ಸುಳ್ಯ ಮತ್ತು ಕುಂದಾಪುರ, ಮೂಡಿಗೆರೆಯಲ್ಲೂ ಪ್ರದರ್ಶನ ನೀಡಲಿದೆ. ಮುಂಬಯಿ, ದುಬೈಯ ಥಿಯೇಟರ್ಗಳಲ್ಲೂ ಚಾಲಿಪೋಲಿಲು ಬಿಡುಗಡೆ ಮಾಡುವ ಸಿದ್ಧತೆ ನಡೆದಿದೆ.

ಪ್ರಸ್ತುತ ಪ್ರದರ್ಶನ ಕಾಣುವ ಎಲ್ಲ ಟಾಕೀಸುಗಳಲ್ಲೂ ಹೌಸ್ಫುಲ್ಗೆ ಕಾರಣವಾಗಿರುವ ಚಾಲಿಪೋಲಿಲು ಸಿನಿಮಾದ ಪ್ರದರ್ಶನವನ್ನು ನಮ್ಮೂ ರಲ್ಲೂ ಒದಗಿಸಬೇಕು ಎಂಬ ಬಲ ವಾದ ಆಗ್ರಹ ಮತ್ತು ಬೇಡಿಕೆ ಶಿವಮೊಗ್ಗದಿಂದ ಬಂದಿರುವುದು ಈ ಸಿನಿಮಾದ ಗುಣಮಟ್ಟ ಮತ್ತು ಜನಪ್ರಿಯತೆಗೆ ಸಾಕ್ಷಿ. ಈವರೆಗೆ ಯಾವುದೇ ತುಳು ಸಿನಿಮಾ ಶಿವಮೊಗ್ಗದಲ್ಲಿ ಪ್ರದರ್ಶನ ಕಂಡದ್ದಿಲ್ಲ. ಆದರೆ ಚಾಲಿಪೋಲಿಲು ಶಿವಮೊಗ್ಗಕ್ಕೂ ತೆರಳಿ ತನ್ನ ದಾಖಲೆಯ ಸರಣಿಗೆ ಹೊಸ ಕೊಂಡಿ ಸೇರಿಸಲು ಮುಂದಾಗಿರುವುದು ತುಳುವರಿಗೆ ಹೆಮ್ಮೆ ತರುವಂಥ ಸಂಗತಿ.
ಚಾಲಿಪೋಲಿಲು ಸಿನಿಮಾ ಬಿಡುಗಡೆಯಾಗಿ ಎರಡು ವಾರವಾಗುತ್ತಾ ಬಂದರೂ ಈಗಲೂ ಎಲ್ಲ ಥಿಯೇಟ ರ್ಗಳಲ್ಲೂ ಟಿಕೆಟ್ ಸಿಗದ ಪರಿಸ್ಥಿತಿ ಯಿದೆೆ. ತುಳು ಸಿನಿಮಾ ಈ ಮಟ್ಟಕ್ಕೆ ಬೆಳೆದು ನಿಲ್ಲಬಹುದು ಎಂದು ಯಾರೂ ಊಹಿಸಿರಲಿಲ್ಲ. ಸಿನಿಮಾ ಪ್ರಿಯರು, ಸಿನಿಮಾ ರಂಗದ ದಿಗ್ಗಜರು ಸೇರಿದಂತೆ ಎಲ್ಲರ ಊಹೆಗಳನ್ನೂ ಅಡಿಮೇಲುಗೊಳಿಸಿ ಮುನ್ನುಗ್ಗುತ್ತಿರುವ ಚಾಲಿಪೋಲಿಲು ಈವರೆಗಿನ ತುಳು ಸಿನಿಮಾಗಳಲ್ಲೇ ಶ್ರೇಷ್ಠಮಟ್ಟದ್ದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಅದರ ಕಥಾ ನಿರೂಪಣೆ, ಗುಣಮಟ್ಟದ ಹಾಸ್ಯ, ಸಾಮಾಜಿಕ ಮೌಲ್ಯ, ಮಾನವೀಯ ಸ್ಪರ್ಶ… ಮುಂತಾದ ವುಗಳು ಯಶಸ್ಸಿನ ಪ್ರಮುಖ ಅಂಶಗಳು. ಶಿವಮೊಗ್ಗ ಸೇರಿದಂತೆ ಮುಂದೆ ಪ್ರದರ್ಶನ ಕಾಣಲಿರುವ ಎಲ್ಲ ನಗರ ಗಳಲ್ಲೂ ಇದೇ ರೀತಿಯ ದಾಖಲೆ ಬರೆಯುವ ಸಾಧ್ಯತೆ ನಿಚ್ಚಳವಾಗಿದೆ.
ಸಿನಿಮಾದಿಂದ ದೂರ ಇದ್ದವರನ್ನು ಸೆಳೆದ `ಚಾಲಿಪೋಲಿಲು’
ತುಳು ಸಿನಿಮಾ ನಾಟಕದಂತೇ ಇರುತ್ತದೆ ಎಂಬ ನೆಪವೊಡ್ಡಿ ತುಳು ಸಿನಿಮಾದ ಸಹವಾಸವೇ ಬೇಡ ಎಂದು ದೂರವಿದ್ದವರನ್ನು `ಚಾಲಿಪೋಲಿಲು’ ತುಳು ಸಿನಿಮಾ ಮತ್ತೆ ಥಿಯೇಟರಿನತ್ತ ಸೆಳೆಯುತ್ತಿದೆ. ತುಳು ಸಿನಿಮಾವೊಂದು ಈ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಪ್ರಚಾರ ಕಾರಣವಲ್ಲ ಎನ್ನುತ್ತಾರೆ ಥಿಯೇಟರ್ ಸಿಬ್ಬಂದಿ. ಯಾಕೆಂದರೆ ಪ್ರತಿಯೊಂದು ಸಿನಿಮಾ ಕೂಡಾ ಸಾಕಷ್ಟು ಪ್ರಚಾರ ಮಾಡುತ್ತದೆ. ಪ್ರಚಾರದ ಹವಾ ಒಂದೆರಡು ದಿನ ಇರಬಹುದಷ್ಟೇ. ಸಿನಿಮಾ ಕೊನೆಗೂ ಗೆಲ್ಲುವುದು ಅದರ ಗಟ್ಟಿತನದ ಕಥೆಯಿಂದ, ಬಿಗಿ ನಿರೂಪಣೆಯಿಂದ. ಸದ್ಯ `ಚಾಲಿಪೋಲಿಲು’ ಯಶಸ್ವಿ ಓಟದ ಹಿಂದೆ ಕೂಡಾ ಕೆಲಸ ಮಾಡಿದ್ದು ಇದೇ ಕಾರಣ. ತುಳು ಚಿತ್ರ ನೋಡಲು ಪ್ರೇಕ್ಷಕರೇ ಬರುವುದಿಲ್ಲ ಎನ್ನುವ ಅಪವಾದವನ್ನು ತೊಳೆದ `ಚಾಲಿಪೋಲಿಲು’ ಯಶಸ್ಸಿಗೊಂದು ಹೊಸ ಪರಿಭಾಷೆ ಬರೆದಿದೆ. ಉತ್ತಮ ಸಿನಿಮಾ ಕೊಟ್ಟರೆ ಕಳೆದುಹೋದ ಪ್ರೇಕ್ಷಕರನ್ನು ಮತ್ತೆ ಥಿಯೇಟರ್ನತ್ತ ಸೆಳೆಯಬಹುದು ಎನ್ನುವುದನ್ನು ತೋರಿ ಸಿಕೊಟ್ಟಿದೆ. ತುಳು ಸಿನಿಮಾ ಬಗ್ಗೆ ಉದಾಸೀನ ಭಾವನೆ ತಳೆದ ಮಂದಿ ಕೂಡಾ ಸಿನಿಮಾ ಮಂದಿರಕ್ಕೆ ಬಂದು `ಚಾಲಿಪೋಲಿಲು’ ನೋಡುತ್ತಿದ್ದಾರೆ. 12ದಿನದಲ್ಲಿ 10ದಿನ ಸಿನಿಮಾ ನೋಡಿ ದವ ರೊಬ್ಬರು ಉಡುಪಿಯಲ್ಲಿದ್ದಾರೆ. ಅಪಾರ ಸಂಖ್ಯೆಯಲ್ಲಿ ಬರುವ ಮಹಿಳೆಯರೇ `ಚಾಲಿಪೋಲಿಲು’ ಸಿನಿಮಾಕ್ಕೆ ಸಟರ್ಿ ಫಿಕೇಟ್ ನೀಡಿದೆ. ಕುಟುಂಬ ಸಮೇತರಾಗಿ ನೋಡಬಹು ದಾದ ಉತ್ತಮ ಸಂದೇಶ, ಮನರಂ ಜನೆಯ `ಚಾಲಿಪೋಲಿಲು’ ನೆಪದಲ್ಲಾದರೂ ತುಳು ಚಿತ್ರರಂಗಕ್ಕೆ ಕಳೆದುಹೋದ ಪ್ರೇಕ್ಷಕರು ಸಿಗುತ್ತಿದ್ದಾರೆ.

.