ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಇರುವೈಲು ಇರುವೈಲು ಶಾಲಾ ಶತಮಾನೋತ್ಸವದ ಅಂಗವಾಗಿ ಸಭಾಕಾರ್ಯಕ್ರಮದ ಉದ್ಘಾಟನೆ ಇರುವೈಲು ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ಮಾನ್ಯ ಶಾಸಕ ಮೂಲ್ಕಿ ಮೂಡಬಿದಿರೆ ಕ್ಷೇತ್ರ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರ ಮಾಜಿ ಸಚಿವ ಅಭಯಚಂದ್ರ ಜೈನ್, ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಸಿಪ್ರಿಯನ್ ಮೊಂತೆರೋ, S.C.D.C.C. ಬ್ಯಾಂಕ್ ನಿವೃತ್ತ ವ್ಯವಸ್ಥಾಪನಾ ನಿರ್ದೇಶಕ ರಘುರಾಮ್ ರಾವ್, ದೇವರಾಜ್ ಕ್ಷೇತ್ರ ಶಿಕ್ಷಣಾಧಿಕಾರಿ, ಮೂಡಬಿದ್ರೆ, ಮೀನಾಕ್ಷಿ ಭಟ್ ‘ಆನಂದ ನಿಲಯ’ ಕಿಟ್ಟುಬೆಟ್ಟು ಇರುವೈಲು, ನಾರಾಯಣ ಶೆಟ್ಟಿ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಮೂಡಬಿದ್ರೆ ವಲಯ, ಐ. ಕುಮಾರ್ ಶೆಟ್ಟಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಕ್ಷೇತ್ರ ಇರುವೈಲು, ವಲೇರಿಯನ್ ಕುಟಿನ್ಹಾ ಅಧ್ಯಕ್ಷರು ಗ್ರಾಮ ಪಂಚಾಯತ್ ಇರುವೈಲು, ಮಾಜಿ ತಾಲೂಕು ಪಂಚಾಯತ್ ಸದಸ್ಯ ರುದ್ಧಯ್ಯ ಪೂಜಾರಿ ಅಳಿಯೂರು, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಉದ್ಯಮಿ ಇರುವೈಲು, ಭುಜಂಗ ಆರ್. ಶೆಟ್ಟಿ ದೊಡ್ಡಗುತ್ತು ಉದ್ಯಮಿ ಮುಂಬಯಿ, ಸದಾನಂದ ಹೆಗ್ಡೆ ಸುಗ್ಗೋಣಿ ಇರುವೈಲು, ಪಿ. ಎಂ. ಅಅ, ಅಧ್ಯಕ್ಷರು ಮಸೀದಿ ರಹಮಾನ್ ಬಾರ್ದಿಲ,ಇರುವೈಲು ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ, ಇರುವೈಲು ಶಾಲೆ ಶತಮಾನೋತ್ಸವ ಸಮಿತಿ ಗೌರವ ಅಧ್ಯಕ್ಷರಾದ ಕರ್ನಾಟಕ ಉಚ್ಚನ್ಯಾಯಾಲಯ ನಿರ್ದೇಶಿತ ಹಿರಿಯ ನ್ಯಾಯವಾದಿ ಐ. ತಾರಾನಾಥ್ ಪೂಜಾರಿ, ಹೈಕೋರ್ಟ್ ವಕೀಲರು ಐ ಚಂದ್ರಹಾಸ ಶೆಟ್ಟಿ, ದಿವಾಕರ ಪ್ರಭು ಹಾಗೂ ಇರುವೈಲು ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ , ಇರುವೈಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ವತಿಯಿಂದ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ 12ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವ ಸಭಾಕಾರ್ಯಕ್ರಮದ ವೇದಿಕೆಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆ ಇದೆ.
