ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಸಮೀಪದ ಸುಧೇಕಾರು ಶ್ರೀ ರಕ್ತೇಶ್ವರಿ ಅಮ್ಮ ಮತ್ತು ಗುಳಿಗ ದೈವಸ್ಥಾನಕ್ಕೆ ಬಿಂಬ ಪ್ರತಿಷ್ಠೆ ಮತ್ತು ಮಹಾಕಲಶೋತ್ಸವ ಪ್ರಯುಕ್ತ ಬುಧವಾರ ಮಧ್ಯಾಹ್ನ ನಡೆದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ದಂಪತಿ ಚಾಲನೆ ನೀಡಿದರು.
ಇಲ್ಲಿನ ಕಲ್ಲಡ್ಕ ಸಮೀಪದ ಸುಧೇಕಾರು ಶ್ರೀ ರಕ್ತೇಶ್ವರಿ ಅಮ್ಮ ಮತ್ತು ಗುಳಿಗ ದೈವಸ್ಥಾನಕ್ಕೆ ಬಿಂಬ ಪ್ರತಿಷ್ಠೆ ಮತ್ತು ಮಹಾ ಕಲಶೋತ್ಸವ ಪ್ರಯುಕ್ತ ಬುಧವಾರ ಮಧ್ಯಾಹ್ನ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಕಲ್ಲಡ್ಕ ಶ್ರೀರಾಮ ಮಂದಿರ ಬಳಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಮತ್ತು ಡಾ.ಕಮಲಾ ಭಟ್ ದಂಪತಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಕೊಂಬು, ಬ್ಯಾಂಡು ವಾದ್ಯ, ಕೀಲು ಕುದುರೆ, ಗೊಂಬೆ ಕುಣಿತ ಮತ್ತು ಬಣ್ಣದ ಕೊಡೆ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಶೆಟ್ಟಿ ಮುಂಬೈ, ಕೋಶಾಧಿಕಾರಿ ಗೋಪಾಲ ಶೆಣೈ ಕಂಟಿಕ, ಪ್ರಧಾನ ಕಾರ್ಯದರ್ಶಿ ಮೋಹನ್ ಪಿ.ಎಸ್., ಜೊತೆ ಕೋಶಾಧಿಕಾರಿ ಕ.ಕೃಷ್ಣಪ್ಪ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಿರಣ್ಮಯಿ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಆರ್.ಚೆನ್ನಪ್ಪ ಕೊಟ್ಯಾನ್, ದಿನೇಶ ಅಮ್ಟೂರು, ಜಯಾನಂದ ಆಚಾರ್ಯ ಕಾಂಪ್ರಬೈಲು, ರಾಮಣ್ಣ ಶೆಟ್ಟಿ, ಮುತ್ತಣ್ಣ ಶೆಟ್ಟಿ ಮತ್ತಿತರರು ಇದ್ದರು.
