ಬಂಟ್ವಾಳ:ಇಲ್ಲಿನ ಮಣಿಹಳ್ಳ -ಜಕ್ರಿಬೆಟ್ಟು ರಾಷ್ಟ್ರೀಯ ಹೆದ್ದಾರಿ ನಡುವಿನ ಚೆಂಡ್ತಿಮಾರು ಎಂಬಲ್ಲಿ ಮಾರುತಿ ಕಾರು ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ, ಕ್ಯಾಟರಿಂಗ್ ಸಂಸ್ಥೆ ಮಾಲೀಕ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಜೂ.01ರಂದು ಬುಧವಾರ ನಡೆದಿದೆ.1btl-Roshan Seravo

ಮೃತರನ್ನು ಮಡಂತ್ಯಾರು ನಿವಾಸಿ, ಕೀರ್ತಿ ಕೆಟರರ್ಸ್ ಸಂಸ್ಥೆ ಮಾಲೀಕ ರೋಶನ್ ಸೆರಾವೊ (೪೩)ಎಂದು ಗುರುತಿಸಲಾಗಿದ್ದು, ಇವರು ಮಂಗಳೂರಿನಿಂದ ಮಡಂತ್ಯಾರು ಮನೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಮಂಗಳೂರು ಕಡೆಗೆ ಬರುತ್ತಿದ್ದ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದೆ.

ಕಾರು ಸಂಪೂರ್ಣ ನುಜ್ಜುಗುಜ್ಜಾಗಿ ಗಂಭೀರ ಗಾಯಗೊಂಡ ಗಾಯಾಳುವನ್ನು ಸ್ಥಳೀಯರು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎಂದು ಸಂಚಾರಿ ಠಾಣೆ ಎಸೈ ಮಾರುತಿ ತಿಳಿಸಿದ್ದಾರೆ. ಜೂ. ೨ರಂದು ಗುರುವಾರ ನಡೆಯಲಿದ್ದ ಮದುವೆ ಕಾರ್ಯಕ್ರಮವೊಂದಕ್ಕೆ ಮಂಗಳೂರಿನಿAದ ಮೀನು ಖರೀದಿಸಿ ವಾಪಾಸು ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

By suddi9

Leave a Reply

Your email address will not be published. Required fields are marked *