ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾವಳಪಡೂರು ಗ್ರಾಮ ಪಂಚಾಯತ್‌ಗೊಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ’’ ಕಾರ್ಯಕ್ರಮವು ಮಾ.12ರಂದು ಶನಿವಾರ ನಡೆಯಿತು.WhatsApp Image 2022-03-14 at 00.45.09

ಮಾಜಿ ಸಚಿವ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ಬೂತ್ ಅಧ್ಯಕ್ಷರ ನಿವಾಸದಲ್ಲಿ ತೆಂಗಿನ ಸಸಿಯನ್ನು ನೆಡುವ ಮುಖಾಂತರ “ಕಾಂಗ್ರೆಸ್ ಪಕ್ಷ ಕಲ್ಪವೃಕ್ಷ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತನ್ನ ಧರ್ಮವನ್ನು ಅತೀ ಹೆಚ್ಚು ಗೌರವಿಸುವ ಜೊತೆಗೆ ಇತರ ಧರ್ಮವನ್ನು ಅಷ್ಟೇ ಪ್ರೀತಿಯಿಂದ ಗೌರವಿಸುವುದನ್ನು ನನ್ನ ಜೀವನದ ಅಂತರಂಗದಲ್ಲಿ ಅಳವಡಿಸಿಕೊಂಡು ರಾಜಕೀಯ ಮಾಡಿರುವುದೇ ರಾಜಧರ್ಮ ಎಂದು ಮಾರ್ಮಿಕವಾಗಿ ನುಡಿದರು.WhatsApp Image 2022-03-14 at 00.46.09

ಪಕ್ಷ ಸಂಘಟನೆಯಲ್ಲಿ ಯುವಕರು ಹೆಚ್ಚು ಆಶಕ್ತಿ ವಹಿಸುವಂತೆ ವಿನಂತಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂಬರುವ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಕರ್ಣ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜೀತ್ ಕುಮಾರ್ ಜೈನ್, ಬೂತ್ ಸಮಿತಿ ಅಧ್ಯಕ್ಷರುಗಳಾದ ಬಾಲಕೃಷ್ಣ ಶೆಟ್ಟಿ, ಅಬ್ದುಲ್ ಸಲಾಮ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಜನಿ ಬಾಬು ಕುಲಾಲ್, ಪಂಚಾಯತ್ ಸದಸ್ಯರುಗಳಾದ ವಿರೇಂದ್ರ ಬಿ ಅಮೀನ್, ಶೋಮಲ್ ಲೋಬೋ, ಅಬ್ದುಲ್ ರಝಾಕ್, ಲಕ್ಷ್ಮೀ ನಾರಾಯಣ ಶರ್ಮ, ಸುರೇಶ್ ಪೂಜಾರಿ, ಪುಷ್ಪ, ಶಫಿಯ, ಲೀನಾ ಡೀಸೊಜಾ, ಮುಖಂಡರಾದ ಅಬ್ದುಲ್ ಲತೀಫ್, ದಿವ್ಯಾ ಶೆಟ್ಟಿ, ಅಝೀಜ್ ವಗ್ಗ, ಗಿರಿಜಾ, ಸಂದೀಪ್, ಆಶ್ರಫ್, ಮೊಹಮ್ಮದ್ ಅಲಿ, ಶಾರದ ಶೆಟ್ಟಿ, ಬೇಬಿ ಶೆಟ್ಟಿ, ಅಸುಂತ ಮರೀಯ, ಮಾರ್ಕ್ ರೋಡ್ರಿಗಸ್, ಕ್ಲಿಪಾರ್ಡ್,ರುಕ್ಮಿಣಿ ಶೆಟ್ಟಿ, ಅಝೀಜ್ ಮೆನಾಡ್, ಉಸ್ಮಾನ್, ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *