ವಿಟ್ಲ : ಪಡಿಬಾಗಿಲು ಶಾಲೆಯಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ ಮತ್ತು ಸಹೋದರ ರವಿಶಂಕರ್ ಕಾರಂತರವರು ತಮ್ಮ ಮಾತೃಶ್ರೀ ದಿ| ಕಸ್ತೂರಿ ಕಾರಂತರವರ ಸ್ಮರಣಾರ್ಥವಾಗಿ ನಿರ್ಮಿಸಿದ ಪ್ರವೇಶದ್ವಾರ ಮತ್ತು ಜಿ ಪಂ ಶಾಸನಬದ್ಧ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಶೌಚಾಲಯದ ಉದ್ಘಾಟನೆಯನ್ನು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ಉದ್ಘಾಟಿಸಿದರು.SHV_6970

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಜಗಜ್ಜೀವನ್‌ರಾಮ್, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ, ಪ್ರಭಾಕರ ಶೆಟ್ಟಿ ದಂಬೆಕಾನ, ಜಿನಚಂದ್ರ ಜೈನ್, ಲಿಂಗಪ್ಪ ಗೌಡ, ತಾರಾನಾಥ ಆಳ್ವ, ಸೀತಾರಾಮ ಶೆಟ್ಟಿ, ಪದ್ಮಾವತಿ, ಪುಷ್ಪಾವತಿ ವೈ ಅತಿಥಿಗಳಾಗಿ ಭಾಗವಹಿಸಿದ್ದರು.SHV_6971

ಈ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ನಡೆದ ಕರಾಟೆ ಸ್ಪರ್ಧಯಲ್ಲಿ ಕಂಚಿನ ಪದಕ ಪಡೆದ ವಿದ್ಯಾರ್ಥಿ ಲತೇಶ್ ಬಿ ಮತ್ತು ಗುತ್ತಿಗೆದಾರ ಎಸ್ ನಾರಾಯನ್ ಇವರನ್ನು ಸನ್ಮಾನಿಸಲಾಯಿತು. ಧನ್ವಿತಾ ಮತ್ತು ಧನುಶ್ರೀ ಆಶಯಗೀತೆ ಹಾಡಿದರು. ಮುಖ್ಯ ಶಿಕ್ಷಕಿ ಶಶಿಕಲಾ ಪ್ರಸ್ತಾವಿಸಿದರು. ಸುಜಾತ ರೈ ಸ್ವಾಗತಿಸಿದರು. ಮಲ್ಲಿಕಾ ಕೆ ಎಸ್ ವಂದಿಸಿದರು. ಪುಷ್ಪಾವತಿ ನಿರೂಪಿಸಿದರು. ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾಸಿರಿ ಶಿಕ್ಷಣ ಕೇಂದ್ರದ ಮತ್ತು ರಜತಮಹೋತ್ಸವ ಸಮಿತಿ ಪದಾಧಿಕಾರಿಗಳು, ಪೋಷಕರು, ಸಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *