ಬಂಟ್ವಾಳ: ಮಂಗಳೂರು ಲಾಡ್ಜ್ ಒಂದರಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಮಂಗಳೂರು ಇಂಟರ್ ಸಿ.ಟಿ. ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ಗುರುಪ್ರಸಾದ್ ಎಂಬವರ ಮೃತದೇಹ ಪತ್ತೆಯಾಗಿದೆ.
ಗುರುಪ್ರಸಾದ್ ಅವರು ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ಕನಪಾಡಿ ನಿವಾಸಿಯಾಗಿರುವ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಸೆ.20 ರಂದು ಮಂಗಳೂರು ಇಂಟರ್ ಸಿಟಿ ಲಾಡ್ಜ್ ನಲ್ಲಿ ತಂಗಿದ್ದರು. ಆ ಬಳಿಕ ರೂಮ್ ಲಾಕ್ ಆಗಿತ್ತು. ಇವತ್ತು ಸಂಶಯ ದ ಮೇಲೆ ಪೋಲೀಸರಿಗೆ ದೂರು ನೀಡಿದ್ದು, ಪಾಂಡೇಶ್ಚರ ಎಸ್.ಐ.ಶೀತಲ್ ನೇತ್ರತ್ವದಲ್ಲಿ ಲಾಡ್ಜ್ ನ ಬಾಗಿಲು ಒಡೆದು ಒಳಗೆ ಪ್ರವೇಶ ಮಾಡಿದಾಗ ಗುರು ಪ್ರಸಾದ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗುರು ಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅಥವಾ ಅಸೌಖ್ಯದಿಂದ ಮೃತಪಟ್ಟಿದ್ದಾರಾ? ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ಗೊತ್ತಾಗಬೇಕಾಗಿದೆ.
