ವಿಟ್ಲ :ವಿಠಲ ಪದವಿ ಪೂರ್ವ ಕಾಲೇಜು ಮತ್ತು ಲಯನ್ಸ್ ಕ್ಲಬ್ ವಿಟ್ಲ ಇದರ ಸಹಯೋಗದೊಂದಿಗೆ ಪ್ರಥಮ ಪಿಯುಸಿ ತರಗತಿ ಆರಂಭದ ದಿನದಂದು ‘ಕೋವಿಡ್ ಮುಂಜಾಗ್ರತಾ ಮಾಹಿತಿ’ ಕಾರ್ಯಕ್ರಮವನ್ನು ೧೬-೦೯-೨೦೨೧ ರಂದು ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಸಲಾಯಿತು. ವಿಟ್ಲದ ಸುರಕ್ಷಾ ಹೆಲ್ತ್ ಸೆಂಟರಿನ ವೈದ್ಯ ಲಯನ್ಸ್ ಜಿಲ್ಲಾ ನಿಕಟಪೂರ್ವ ರಾಜ್ಯಪಾಲಕ ಡಾ| ಗೀತಪ್ರಕಾಶ್ ಮಾಹಿತಿ ನೀಡಿದರು.
ವಿಠಲ ವಿದ್ಯಾ ಸಂಘದ ಪದಾಧಿಕಾರಿಗಳಾದ ಬಾಬು ಕೊಪ್ಪಳ, ನಿತ್ಯಾನಂದ ನಾಯಕ್, ಪದ್ಮಯ್ಯ ಗೌಡ, ಪ್ರಶಾಂತ ಚೊಕ್ಕಾಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ಮತ್ತಿ ಲಿಯೋ ಕ್ಲಬ್ ಅಧ್ಯಕ್ಷೆ ಯುಕ್ತಾ ವೇದಿಕೆಯಲ್ಲಿದ್ದರು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಪ್ರಸ್ತಾವಿಸಿ ಸ್ವಾಗತಿಸಿದರು. ಕೃಪಾ ಆಶಯಗೀತೆ ಹಾಡಿದರು. ಚಂದ್ರಕಾಂತ್ ವಂದಿಸಿದರು. ಜಲಜಾಕ್ಷಿ ನಿರೂಪಿಸಿದರು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.
