ಮಂಗಳೂರು: ದಕ್ಷಿಣ ಕನ್ನಡ ಜೆಲ್ಲೆ ಯಲ್ಲಿ ಪಕ್ಷ ಆರ್ಥಿಕವಾಗಿ ಹಿಂದುಳಿದ ಸಮಯದಲ್ಲಿ ಪಕ್ಷಕ್ಕೆ ಆರ್ಥಿಕ ಬಲ ತುಂಬಿ ಪಕ್ಷವನ್ನು ಕಟ್ಟಿ ಬೆಳೆಸಿದ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರು ನಿಜವಾಗಿಯೂ ಅಭಿವೃದ್ಧಿಯ ಹರಿಕಾರರು ಎಂದರೆ ತಪ್ಪಾಗಲಿಕ್ಕಿಲ್ಲ.  ಅವರು  ಸಚಿವಾರಾಗಿದ್ದಾಗ ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಕೋಟಿ ಕೋಟಿ ಅನುದಾನ ಒದಗಿಸಿದ್ದರು.download (1)
ಇತ್ತೀಚಿಗೆ ಕರ್ನಾಟಕ ರಾಜ್ಯಾದಾಂದ್ಯಂತ ಲಕ್ಷಾಂತರ ಬಡಜನರಿಗೆ ಹಕ್ಕು ಪತ್ರ ಸಿಗಬೇಕಾದರೆ ಪಾಲೆಮಾರ್ ಸಚಿವರಾಗಿದ್ದ ಸಮಯದಲ್ಲಿ ಬಡ ಜನರ ಹಕ್ಕು ಪತ್ರಗಳ ಅಹವಾಲುಗಳನ್ನು ಸ್ವೀಕರಿಸಿ ಅಂದಿನ ಗೃಹ ಸಚಿವರಾಗಿದ್ದ ಉಡುಪಿಯ ಡಾ ಬಿಎಸ್ ಆಚಾರ್ಯ ರೊಂದಿಗೆ ಹಗಲು ರಾತ್ರಿ ಕೆಲಸ ಮಾಡಿರುವುದರ ಫಲವಾಗಿ 94ಸಿ ಯ ರೂಪದಲ್ಲಿ ಲಕ್ಷಾಂತರ ಜನ ಹಕ್ಕುಪತ್ರದ ಇಂದು ಫಲಾನುಭವಿಗಳಾಗಿದ್ದಾರೆ.. ಅದರ ಕ್ರೆಡಿಟ್ ಅವರಿಬ್ಬರಿಗೆ ಸಲ್ಲುತ್ತದೆ.ರಾಜಕೀಯ ದ್ವೇಷದಿಂದ ಯಾರೋ ಮಾಡಿದ ಸಣ್ಣ ತಪ್ಪಿಗೆ ಅವರು ರಾಜಕೀಯದಿಂದ ಬದಿಗೆ ಸರಿದು ಸಮಾಜಕ್ಕೆ ದೊಡ್ಡ ಮಟ್ಟದ ನಷ್ಟವಾಗಿದೆ. ಅವರು ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗಿ ರಾರಾಜಿಸಲೆಂಬುದೇ ಅವರ ಅಭಿಮಾನಿಗಳ ಜನತೆಯ ಆಶಯವಾಗಿದೆ.

By suddi9

Leave a Reply

Your email address will not be published. Required fields are marked *