ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆದ ಶ್ರೀನಿವಾಸ್ ನಾಯಕ್ ಇಂದಾಜೆ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಮತ್ತು ಭಾಸ್ಕರ ರೈ ಕಟ್ಟ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.Shrinivas Nayak Indaje (A)

ಇಂದಿಲ್ಲಿ ಮಂಗಳವಾರ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಹಕಾರ ಸಂಘದ ಹಿರಿಯ ನಿರೀಕ್ಷಕ ಶಿವಲಿಂಗಯ್ಯ.ಎ ಚುನಾವಣಾಧಿಕಾರತ್ವದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಪ್ರಕ್ರಿಯೆಯಲ್ಲಿ ಉಭಯ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಸಲ್ಪಟ್ಟಿತು.

ಸಂಘದ ನಿರ್ದೇಶಕರಾದ ಕೇಶವ ಕುಂದರ್, ಪುಷ್ಪರಾಜ್ ಬಿ.ಎನ್, ಇಬ್ರಾಹಿಂ ಅಡ್ಕಸ್ಥಳ, ಆರಿಫ್ ಪಡುಬಿದ್ರೆ, ಜಿತೇಂದ್ರ ಕುಂದೇಶ್ವರ, ಆತ್ಮಭೂಷಣ್ ಭಟ್, ಸತ್ಯವತಿ, ಕೆ.ವಿಲ್ಫೆçಡ್ ಡಿಸೋಜ, ಹರೀಶ್ ಮೋಟುಕಾನ, ವಿಜಯ ಕೋಟ್ಯಾನ್ ಪಡು, ಸುಖ್‌ಪಾಲ್ ಪೊಳಲಿ, ಸುರೇಶ್ ಡಿ.ಪಳ್ಳಿ, ಶಿಲ್ಪಾ ಕುಮಾರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿರಿ ಅಭಿಷೇಕ್.ಕೆ ಉಪಸ್ಥಿತರಿದ್ದರು.

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಗೆ ಇತ್ತೀಚೆಗೆ ಚುನಾವಣೆ ನಡೆಸಲ್ಪಟ್ಟಿದ್ದು ೧೫ ಸ್ಥಾನಗಳ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ೯ ಸಾಮಾನ್ಯ ಸ್ಥಾನಳಿಗೆ ಮತ್ತು ಹಿಂದುಳಿದ ವರ್ಗ ಎ ಮೀಸಲು ೨ ಸ್ಥಾನಗಳಿಗೆ ಚುನಾವಣೆ ಏರ್ಪಟ್ಟಿತ್ತು

By suddi9

Leave a Reply

Your email address will not be published. Required fields are marked *