ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದ‌.ಕ. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಶಿಸುತ್ತಿರುವ ಭತ್ತದ ಕೃಷಿಯ ಸಂರಕ್ಷಣೆ ಯ ಬಗ್ಗೆ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಭತ್ತದ ಕೃಷಿಕರೊಂದಿಗೆ ಪತ್ರಕರ್ತರ ಸಾಮೂಹಿಕ ಭತ್ತದ ನಾಟಿ ಕಾರ್ಯಕ್ರಮ ಅಳಿಕೆ ಗ್ರಾಮದ ಮಿತ್ತಳಿಕೆಯ (ಚೆಂಡುಕಳ) ಗದ್ದೆಯಲ್ಲಿ ಜು.29 ರಂದು ಬೆಳಗ್ಗೆ 9ಗಂಟೆಯಿಂದ ನಡೆಯಲಿದೆ.

ಮಂಗಳೂರಿನಿಂದ ಬರುವವರಿಗೆ ಗುರುವಾರ ಬೆಳಗ್ಗೆ ವುಡ್ ಲ್ಯಾಂಡ್ಸ್ ಹೊಟೀಲ್ ಬಳಿಯಿಂದ ವಾರ್ತಾ ಇಲಾಖೆಯ ವಾಹನ ಬೆಳಗ್ಗೆ 7.30 ಗಂಟೆಗೆ ಹೊರಡಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ಅನುಕೂಲ ವಾಗುವ ಉಡುಪು ತರಬೇಕಾಗಿ ಎಂದು  ಕಾರ್ಯ ನಿರತ ಪತ್ರಕರ್ತರ ಸಂಘದ  ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *