ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಜೂನ್ 28 ರಂದು ಸೋಮವಾರ ವ್ಯಾಕ್ಸಿನ್ ಶಿಬಿರ ನಡೆಯಿತು. ನ್ಯಾಯವಾದಿ ಸತೀಶ್ ಶಿವಗಿರಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಾಳ್ತಿಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೈತ್ರಾ ವ್ಯಾಕ್ಸಿನ್ ನ ಕುರಿತಾಗಿ ಅಗತ್ಯ ಮಾಹಿತಿ ನೀಡಿದರು. ಪದವಿ ವಿಭಾಗದ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಆಶಾ ಕಾರ್ಯಕರ್ತರು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 250 ಜನ ವಿದ್ಯಾರ್ಥಿಗಳು ವ್ಯಾಕ್ಸಿನ್ ಪಡೆದುಕೊಂಡರು. ಈ ಮೂಲಕ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಆಡಳಿತ ಮಂಡಳಿಯ ಸದಸ್ಯರು ವ್ಯಾಕ್ಸಿನ್ ಪಡೆದುಕೊಂಡಂತಾಯಿತು. ಈ ಮೂಲಕ ಶೇಕಡಾ 100ರಷ್ಟು ವ್ಯಾಕ್ಸಿನ್ ಪಡೆದ ಮೊದಲ ವಿದ್ಯಾಸಂಸ್ಥೆ ಎಂದು ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜು ಹೆಗ್ಗಳಿಕೆಯನ್ನು ಪಡೆದುಕೋಂಡಿತು.

