ಮಾಣಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನ ಏ.ಟಿ.ಎಂ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ
ಬಂಟ್ವಾಳ ತಾಲೂಕಿನ ಮಾಣಿ ಊರಿನಲ್ಲಿ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರ ಕೈಯಲ್ಲಿ ನಗದು ಕಾಸಿದ್ರೆ ಒಳ್ಳೆಯದು.ಇಲ್ಲದಿದ್ದರೆ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಜನರಿಗೆ ಉಳಿದವರ ಬಳಿ
ಕೈ ಸಾಲ ಮಾಡರಿ ಅನ್ನುವಂತಿದೆ ಇಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ. ಗ್ರಾಮಾಂತರ ಪ್ರದೇಶದ ಕೇಂದ್ರ ಮಾಣಿ ಊರಿನಲ್ಲಿ ಏಕೈಕ
ರಾಷ್ಟ್ರೀಕೃತ ಬ್ಯಾಂಕ್ ಆಗಿ
ಬ್ಯಾಂಕ್ ಆಫ್ ಬರೋಡ
ಇದ್ದರೂ ಏಟಿಎಂ ವ್ಯವಸ್ತೆ ಇಲ್ಲ.ಜನರು ನಗದು ಹಣಕ್ಕಾಗಿ ಪರದಾಡುವ ಸನ್ನಿವೇಶ ಎದುರಾಗಿದೆ. ಚಿಲ್ಲರೆ ಹಣಕ್ಕಾಗಿ ಬ್ಯಾಂಕ್ ಮುಂದೆ ಮುಂಜಾನೆ ಯಿಂದ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣ ಆಗಿದೆ.ಲಾಕ್ ಡೌನ್ ಈ ಸಂಕಷ್ಟದ ದಿನಗಳಲ್ಲಿ ಉಳಿದ ಸಮಯದಲ್ಲಿ ತುರ್ತಾಗಿ ಹಣದ ಅಗತ್ಯ ಕ್ಕಾಗಿ ಕಲ್ಲಡ್ಕ ಅಥವಾ ಬೇರೆ ಕಡೆ ಹೋಗುವ ಹಾಗಿಲ್ಲ.ಆಪತ್ಕಾಲದಲ್ಲಿ ಹೋದರೂ
ಪೋಲೀಸ್ ಅಧಿಕಾರಿಗಳಿಂದ ವಿಚಾರಣೆಗೆ ಒಳಪಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗೆ ತುರ್ತಾಗಿ ನಗದು ಹಣ ಕ್ಕಾಗಿ ಜನರು ಪರದಾಡುವ ಸನ್ನಿವೇಷ ನಿರ್ಮಾಣ ಆಗಿದೆ. ಇದರಿಂದ ಬೇಸತ್ತ ಜನರು ಮಾಣಿಯಲ್ಲಿ ಮುಂದಿನ ದಿನಗಳಲ್ಲಿ ಶೀಘ್ರವಾಗಿ ಏ.ಟಿ.ಎಂ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
