ಮಂಗಳೂರು:ಕೊರೋನಾ ಎರಡನೇ ಅಲೆ ನಿಯಂತ್ರಣ ಹಿನ್ನೆಲೆ ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್ ನಿಂದ ಸಹಾಯಾಸ್ಥ . ಜಿಲ್ಲಾಡಳಿತಕ್ಕೆ ೨೦ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿ ಸ್ಯಾನಿಟೈಸರ್, ಸಾಬೂನು, ಮಾಸ್ಕ್ ಸೇರಿ ೮ ಲಕ್ಷಕ್ಕೂ ಅಧಿಕ ಮೊತ್ತದ ಕಿಟ್ ಹಸ್ತಾಂತರ ಮಾಡಿದರು.
ದ.ಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್ ಸಂಸ್ಥೆ ದ.ಕ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಡಿಎಚ್ಓ ಕಿಶೋರ್ ಕುಮಾರ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಅವರಿಗೆ ಹಸ್ತಾಂತರಿಸಿದರು. ಸಂಸ್ಥೆಯ ಫ್ಯಾಕ್ಟರಿ ಮ್ಯಾನೇಜರ್ ಸಂಜಯ್ ಸಿಕ್ವೇರ, ಎಚ್ ಆರ್ ಮ್ಯಾನೇಜರ್ ರಾಜ್ ಕುಮಾರ್ ವರ್ಮಾ, ಎಚ್ ಆರ್ ಎಕ್ಸಿಕ್ಯುಟಿವ್ ಚಿದಾನಂದ ಯೆಯ್ಯಡಿ ಉಪಸ್ಥಿತರಿದ್ದರು.
