ಬಡಗಬೆಳ್ಳೂರು : ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಮಹಮ್ಮಾಯಿ ಕ್ಷೇತ್ರ ಬಡಗಬೆಳ್ಳೂರು ಇದರ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯು ಕ್ಷೇತ್ರದ ವಠಾರದಲ್ಲಿ ನಡೆಯಿತು.
ಬೆಳ್ಳೂರು ಶ್ರೀ ಮಹಮ್ಮಾಯಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ ಎ.18 ಭಾನುವಾರ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಸ್ವಾಗತಿಸಿದರು ಸಮಿತಿಯ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ ಬಾಳಿಕೆ ಪ್ರಾಸ್ತಾವಿಕ ಮಾತನಾಡಿ ಕೋವಿಡ್ ಘಟ್ಟದ ಈ ಕಾಲದಲ್ಲಿ ಬ್ರಹ್ಮಕಲಶೋತ್ಸವ ಸರಕಾರದ ನಿಯಮದಂತೆ ನಡೆಸುವ ಬಗ್ಗೆ ಅಭಿಪ್ರಾಯಗಳನ್ನು ಕೇಳಿದರು
ಬ್ರಹ್ಮಕಲಶೋತ್ಸವದ ಇತರ ಸಮಿತಿ ಗಳಲ್ಲಿರುವ ಎಲ್ಲಾ ಸದಸ್ಯರು ತಮ್ಮ ತಮ್ಮ ಸಮಿತಿಯ ಜವಾಬ್ದಾರಿಯನ್ನು ನಿಭಾಯಿಸಿ ಬ್ರಹ್ಮಕಲಶೋತ್ಸವ ವನ್ನು ಯಶಸ್ವಿಯಾಗಿ ನಡೆಸುವಂತೆ ಕರೆನೀಡಿದರು ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರಕಾಶ್ ಅಲ್ವಾ, ಜಯರಾಮ ಶೆಟ್ಟಿ ದಾಸಕೋಡಿ, ರಮೇಶ್ ಬಟ್ಟಾಜೆ, ಸವಿತಾ ಎನ್ ಶೆಟ್ಟಿ ಬೆಳ್ಳೂರು ಗುತ್ತು, ಕೃಷ್ಣಪ್ರಸಾದ್ ರೈ, ವೀಣಾ ಭಟ್ ಕೊಡಿ, ದಿನೇಶ್ ವರಕೊಡಿ, ಗಣೇಶ್ ಪ್ರಸಾದ್ ವರಕೋಡಿ, ಸೀತಾರಾಮ ಪುಂಜ ಅತಿಕಾರ ಹಿತ್ತಲು, ಗಂಗಾಧರ ರೈ ಕಮ್ಮಜೆ, ಪುಷ್ಪರಾಜ ಶೆಟ್ಟಿ ಕಮ್ಮಜೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
