ಪೊಳಲಿ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಒಂದು ತಿಂಗಳ ಜಾತ್ರಾಮಹೋತ್ಸವದ ಧ್ವಜವರೋಹಣ ನಡೆದ ಮರುದಿನ ಮಂಗಳವಾರ ಕೊಡಮಣಿತ್ತಾಯಿ ದೈವದ ನೇಮ ನಡೆಯಿತು.
ದೇವಳದ ತಂತ್ರಿವರ್ಗದವರು,ಅರ್ಚಕವೃಂದದವರು, ಅಮ್ಮುಂಜೆಗುತ್ತು ಹಾಗೂ ಉಳಿಪಾಡಿಗುತ್ತಿನವರು ಉಪಸ್ಥಿತರಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ದೈವದ ಗಂಧಪ್ರಸಾದ ಸ್ವೀಕರಿಸಿದರು.



