ಮಂಗಳೂರು:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್‍ನಲ್ಲಿ ಮಂಡಿಸಿದ ಕೇಂದ್ರ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.download

ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದು, ಭವಿಷ್ಯದಲ್ಲಿ ರೈತರ ಬಾಳು ಉಜ್ವಲವಾಗಲಿದೆ. ಹಲವು ವಸ್ತುಗಳ ಮೇಲೆ ಕೃಷಿ ಸೆಸ್ ಹಾಕಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಸಂಬಂಧಿಸಿದ ಅನೇಕ ಯೋಜನೆಗಳಿಗೆ ದೊಡ್ಡ ಮಟ್ಟಿನ ಅನುದಾನ ಹರಿದುಬರಲಿದೆ. ಇದು ದೇಶದ ಕೃಷಿ ವಲಯವನ್ನು ದೊಡ್ಡ ಮಟ್ಟಿನಲ್ಲಿ ಉತ್ತೇಜಿಸಲಿದೆ.

ಆರೋಗ್ಯ ಕ್ಷೇತ್ರಕ್ಕೂ 64,180 ಕೋಟಿ ರೂ. ಅನುದಾನ ಮೀಸಲಿಡುವ ಮೂಲಕ ದೇಶದ ಎಲ್ಲ ಪ್ರಜೆಗಳ ಸ್ವಾಸ್ಥ್ಯ ಕಾಪಾಡುವ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಚಿನ್ನ, ಬೆಳ್ಳಿ ದರಗಳನ್ನು ಇಳಿಸುವುದರ ಮೂಲಕ ಜನಸಾಮಾನ್ಯರ ಮೇಲಿನ ಹೊರೆ ಇಳಿಸಲಾಗಿದೆ. ಇನ್ನು ಕಬ್ಬಿಣ ಮತ್ತು ಉಕ್ಕುಗಳ ಮೇಲಿನ ಸುಂಕ ಇಳಿಸಿರುವುದರಿಂದ ನಿರ್ಮಾಣ ಕ್ಷೇತ್ರಕ್ಕೂ ದೊಡ್ಡ ಮಟ್ಟಿನ ಉತ್ತೇಜನ ದೊರೆಯಲಿದೆ. ಒಟ್ಟಿನಲ್ಲಿ 2021- 22ನೇ ಸಾಲಿನ ಕೇಂದ್ರ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶಾಸಕ ಕಾಮತ್ ಪ್ರತಿಕ್ರಿಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *