ಬಂಟ್ವಾಳ:ಕುಲಾಲ ಸುಧಾರಕ ಸಂಘ (ರಿ) ಪೊಸಳ್ಳಿ ಕುಲಾಲ ಸಮುದಾಯ ಭವನ ಪೊಸಳ್ಳಿ ಬಿ. ಸಿ ರೋಡ್ ಇಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾಯ೯ಕ್ರಮವು ಜ.24ರಂದು ಭಾನುವಾರ ನಡೆಯಿತು.
ಅಧ್ಯಕ್ಷತೆಯನ್ನು ಶ್ರೀಮತಿ ಜಯಂತಿ ಗಂಗಾಧರ್ ವಹಿಸಿದ್ದರು. ಸುಮಾರು 48 ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ. 18 ವಿಧ್ಯಾಥಿ೯ಗಳಿಗೆ ನಿರಂತರ ವಿಧ್ಯಾರ್ಥಿ ವೇತನ 9 ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ದ. ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯ್ಯೂರ್ ಉಳ್ಳಾಲ್, ಬಂಟ್ವಾಳಸಾರ್ವಜನಿಕ ಆಸ್ಪತ್ರೆಯ ಕೀಲು ಮತ್ತು ಎಲುಬು ತಜ್ಞರಾದ ಡಾ! ಚೇತನ್ ರಾಜ್, ಪುರಂದರ ಸಜೀಪ ಸೀನಿಯರ್ ಮ್ಯಾನೇಜರ್ ,ಬಂಟ್ವಾಳ ಕುಲಾಲ ಸಂಘ ಪ್ರಧಾನ ಕಾರ್ಯದರ್ಶಿ ರಮೇಶ್ ಸಾಲಿಯನ್, ಕುಲಾಲ ಸಂಘ ಬಂಟ್ವಾಳ ಕೋಶಾಧಿಕಾರಿ ಸುಕುಮಾರ್ ಬಂಟ್ವಾಳ, ಶ್ರೀಮತಿ ನಮಿತಾ ಉಮೇಶ್ ಅಧ್ಯಕ್ಷರು ಮಹಿಳಾ ಘಟಕ ಬಂಟ್ವಾಳ ನಿಶಾಂತ್ ಎಂ. ಬಿ ಸೇವಾದಳಪತಿ ಕುಲಾಲ ಸಂಘ ಬಂಟ್ವಾಳ.ದಾಮೋದರ ಮಾಸ್ತರ್ ಸ್ವಾಗತಿಸಿ. ಸುಕುಮಾರ್ ಬಂಟ್ವಾಳ ಧನ್ಯವಾದ ವಿತ್ತರು.ರಾಧಕೃಷ್ಣ ಬಂಟ್ವಾಳ ಕಾಯ೯ಕ್ರಮ ನಿರೂಪಿಸಿದ್ದರು.
