ಬಂಟ್ವಾಳ: ದೈವಗಳ ಸಾನಿಧ್ಯ ಮತ್ತು ಅಡೆಪಿಲ ಶ್ರೀಧರ್ಮರಸು ದೈವಸ್ಥಾನದ ಜೀರ್ಣೋದ್ದಾರ ಕುರಿತಂತೆ ದೈವಜ್ನರಾದ ಶ್ರೀರಾಮಮೂರ್ತಿ ಆಚಾರ್ಯ ಇವರ ತಂಡದಿಂದ ತಾಂಬೂಲ ಪ್ರಶ್ನೆಯು ಶಂಬೂರಿನ ದೈವಸ್ಥಾನದಲ್ಲಿ ನಡೆಯಿತು.
ಸ್ಥಳದಲ್ಲಿ ವಿಷ್ಣು, ಶಿವನ ಮತ್ತು ದೇವಿಯ ಸಾನಿಧ್ಯವಿರುವುದಾಗಿ ಮತ್ತು ಭಂಡಾರದ ಮನೆಯ ಜುಮಾದಿಗೂ ದೇವಿಗೂ ಸಂಬಂಧವಿರುವುದಾಗಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಹಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರಸು ದೈವಗಳಿಗೆ ಪರ್ವ ಕೋಲ ನೀಡುವ ಮೊದಲು ನಾಗನಿಗೆ ತಂಬಿಲ ನೀಡುವುದು ಮತ್ತು
ದೇವಿಯನ್ನು ಶೂಲಿನಿ ದುರ್ಗಾಪರಮೇಶ್ವರಿ ಶಕ್ತಿಯಾಗಿ ಮೂಲ ಸ್ಥಳದಲ್ಲೇ ವಿಧಿವತ್ತಾಗಿ ಪ್ರತಿಷ್ಟಾಪಿಸಿ ಆರಾಧಿಸಿದಾಗ ಸಾನಿಧ್ಯ ವರ್ಧಿಸಿಗ್ರಾಮಕ್ಕೆ ಮತ್ತು ಭಂಡಾರದ ಮನೆ ಕುಟುಂಬಕ್ಕೆ ಶ್ರೇಯೋಭಿವ್ರದ್ದಿ ನೆಮ್ಮದಿ ನೆಲೆಸುವುದು ಎಂದು ಕಂಡು ಬಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಒಂದನೇ ಗುತ್ತಿನಯಜಮಾನರಾದ ವಿಶ್ವನಾಥ್ ಪೂಜಾರಿ, ದೈವದ ಪ್ರಧಾನ ಅರ್ಚಕರಾದ ಜಗನ್ನಾಥ ಪೂಜಾರಿ, ಬರ್ಕೆ ಗುತ್ತಿನ ಮೋನಪ್ಪಸಪಲ್ಯ,ಅಡೆಪಿಲ ಭಂಡಾರದ ಮನೆ ಕುಟುಂಬದ ಯಜಮಾನರಾದ ಜನಾರ್ಧನ ಧರ್ಮಸ್ಥಳ, ಟ್ರಸ್ಟ್ ಅಧ್ಯಕ್ಷರಾದ ಮೀನ ಭಗವಾನ್ದಾಸ್,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ್, ಉಪಾಧ್ಯಕ್ಷ ಎಸ್.ತಾರನಾಥ್, ಕಾರ್ಯದರ್ಶಿ.ಡಾ.ನವೀನ್ ಬಪ್ಪಳಿಗೆ, ಸದಸ್ಯಯಶೋಧರ್, ಗುತ್ತಿನ ಮನೆಯವರು, ಗ್ರಾಮಸ್ಥರು ಮತ್ತು ಭಂಡಾರದ ಮನೆ ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
