ಬಂಟ್ವಾಳ: ಕರ್ಣಾಟಕ ಬ್ಯಾಂಕ್ ವತಿಯಿಂದ  ವಾಮದಪದವು ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ಒದಗಿಸಿರುವ ಅಂಬ್ಯುಲೆನ್ಸ್ ಸೇವೆಗೆ ಶನಿವಾರ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು. ಬಂಟ್ವಾಳ ಸಮುದಾಯ ಆರೋಗ್ಯಕೇಂದ್ರದ ಅವರಣದಲ್ಲಿ‌ ಶಾಸಕರು ಅಂಬ್ಯುಲೆನ್ಸ್ ಗೆ ಹಸಿರು ನಿಶಾನೆ ತೋರಿದರು.IMG-20210116-WA0027

ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷ ಜೆಸಿಂತಾ ಡಿಸೋಜ,ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ,ಜಿಪಂ ಸದಸ್ಯರಾದ ರವೀಂದ್ರ ಕಂಬಳಿ,  ತುಂಗಪ್ಪ ಬಂಗೇರ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ  ದೇವದಾಸ ಶೆಟ್ಟಿ, ತಹಶೀಲ್ದಾರ್ ರಶ್ಮೀ ಎಸ್ ಆರ್, ತಾಪಂ ಇಒ ರಾಜಣ್ಣ , ಸಿಡಿಪಿಒಗಳಾದ ಗಾಯತ್ರಿ ಆರ್ ಕಂಬಳಿ, ಸುಧಾಜೋಶಿ,  ಶಿಕ್ಷಣಾಧಿಕಾರಿ ಜ್ಞಾನೇಶ್,   ಶಿಕ್ಷಣಾ ಇಲಾಖೆಯ ಸಂಯೋಜಕಿ  ಸುಜಾತಭಟ್,ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಪುಪ್ಪಲತಾ ಮೊದಲಾದವರು ಉಪಸ್ಥಿತರಿದ್ದರು.ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಸ್ವಾಗತಿಸಿ,ವಂದಿಸಿದರು.

By Suddi9

Leave a Reply

Your email address will not be published. Required fields are marked *