ಕೋಲಾರ: ಶ್ರೀನಿವಾಸಪುರದಲ್ಲಿ ನಡೆಯಲಿರುವ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯ ಅಧ್ಯಕ್ಷರಾಗಿ ಕನ್ನಡ ಉಪನ್ಯಾಸಕ ಅನೀಫ್ ಸಾಬ್ ಎಸ್ ರವರು ಆಯ್ಕೆಯಾಗಿದ್ದಾರೆ.anif sab news

ಇವರು ಶ್ರೀನಿವಾಸಪುರ ತಾಲೂಕಿನ ಯಲ್ದೂರು ಹೋಬಳಿಯ ಮುತ್ತಕಪಲ್ಲಿ ಗ್ರಾಮದ ಸಾಬುಸಾಬ್ ಹಾಗೂ ಅಫ್‍ಶಾದ್ ಬೇಗಂ ರವರ ಮಗನಾಗಿ ಜನಿಸಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಹಲವಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕವಿಯಾಗಿ, ಲೇಖಕರಾಗಿ ಕನ್ನಡ ಶ್ರೀಮಂತಿಕೆಯನ್ನು ಹೆಚ್ಚಿಸಿರುತ್ತಾರೆ.

ಜೊತೆಗೆ ಕರ್ನಾಟಕದ ರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾ ಮಟ್ಟದ ಗುರು ಶ್ರೇಷ್ಠ ಪ್ರಶಸ್ತಿಯನ್ನು ಪಡೆದ್ದಿದ್ದಾರೆ. ಇವರು ಸಾಹಿತ್ಯಸಕ್ತರಾಗಿ ರಾಜ್ಯಮಟ್ಟದ ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ಇದು ತಾಲೂಕಿನ ಹೆಮ್ಮೆಯ ವಿಷಯವಾಗಿದೆ.

By suddi9

Leave a Reply

Your email address will not be published. Required fields are marked *