ವಿಟ್ಲ: ಮಾದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಬಿ ಬಾಲಕೃಷ್ಣ ಅಡ್ಯಂತಾಯರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಪ್ರಭಾಕರ್ ಮತ್ತು ವಿಸ್ತರಣಾಧಿಕಾರಿ ನಾಗೇಶ್ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಮಹಾಬಲ ಭಟ್ಟ, ನಿರ್ಧೇಶಕರುಗಳಾದ ಚಂದ್ರಹಾಸ ಶೆಟ್ಟಿ ಸಾಗು, ಎಂ ಗೋಪಾಲಕೃಷ್ಣ ಭಟ್, ತೋಡ್ಲ ರಾಧು, ಬಿ ರತಿ, ಕೆ ರಂಜಿನಿ, ಅಬೂಬಕ್ಕರ್ ಸೆರ್ಕಳ, ಗೋಪಾಲ ಸಪಲ್ಯ ಕಲ್ಲಮಜಲು, ಚೆನ್ನಪ್ಪ ಪೂಜಾರಿ ತೋಡ್ಲ ಮತ್ತು ಸೋಮಶೇಖರ ಶೆಟ್ಟಿ ಕೊಪ್ಪಲ ಉಪಸ್ಥಿತರಿದ್ದರು. ರೇಣುಕಾ ಪ್ರಾರ್ಥಿಸಿದರು. ಕಾರ್ಯದರ್ಶಿ ಹರೀಶ್ ಕಾರ್ಯಕ್ರಮ ಸಂಯೋಜಿಸಿದರು.
