ಮಂಗಳೂರು: ಉಡುಪಿ ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರನ್ನು ಮಂಗಳೂರಿನ ಶಿಷ್ಯವರ್ಗ ಗಾಳದಕೊಂಕಣಿ ಸಮಾಜ ಬಾಂಧವರ ನಿಯೋಗ ಭೇಟಿಯಾಗಿ ಆರ್ಶೀವಾದ ಪಡೆದರು. ಈ ಸಂದರ್ಭದಲ್ಲಿ ಅನುಗ್ರಹ ಮಂತ್ರಾಕ್ಷತೆ ನೀಡಿ ಸಮಾಜಕ್ಕೆ ಆಶೀರ್ವಚನಗೈದ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದರು ಪ್ರತಿನಿತ್ಯ ಒಂದಷ್ಟು ಸಮಯವನ್ನು ಮೀಸಲಿಟ್ಟು ಶ್ರೀಕೃಷ್ಣ ನಾಮಸ್ಮರಣೆಯನ್ನು ಜಪಿಸಬೇಕು ತನ್ಮೂಲಕ ಜೀವನವನ್ನು ಸಾರ್ಥಕ್ಯಗೊಳಿಸಬೇಕು ಎಂದು ನುಡಿದರು.
ಶ್ರೀ ದೇವರಿಗೂ ಪ್ರಿಯವಾದ ಕಾಲದಲ್ಲಿ ಗುರು-ಶಿಷ್ಯರ ಭೇಟಿ ಸಂತಸ ತಂದಿದ್ದು,ಈ ಪರಂಪರೆ ನಿರಂತರವಾಗಿ ಮುಂದುವರಿಯುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ,ಉಪಾಧ್ಯಕ್ಷೆ ಡಾ.ಧನಲಕ್ಷ್ಮೀ ಎಂ.ನಾಯಕ್,ಪ್ರಧಾನ ಕಾರ್ಯದರ್ಶಿ ಮುರಳೀಧರ ನಾಯಕ್, ಜತೆ ಕಾರ್ಯ ದರ್ಶಿ ವೆಂಕಟೇಶ್ ಬಂಟ್ವಾಳ,ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಪಂಪ್ ವೆಲ್,ಹೇಮಾ ಮಂಕಿಸ್ಟ್ಯಾಂಡ್,ಕೋಶಾಧಿಕಾರಿ ಚಂದ್ರಶೇಖರ್ ನಾಯಕ್ ಬಪ್ಪಾಲ್,ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ನಾಯಕ್ ಕಲ್ಲಾಪು,ಅಧ್ಯಕ್ಷ ಜೆ.ರವೀಂದ್ರ ನಾಯಕ್,ಶ್ರೀ ಸೋಮೇಶ್ವರೀ ಸೌ.ಸ.ನಿಯಮಿತದ ಉಪಾಧ್ಯಕ್ಷ ಧರ್ಮಪಾಲ್ ನಾಯಕ್ ಪಂಪ್ ವೆಲ್,ಶ್ರೀ ಸೋಮೇಶ್ವರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಶಾರದಾ ಎಂ. ನಾಯಕ್ ಅಸೈಗೋಳಿ,ಸಮಿತಿ ಸದಸ್ಯರಾದ ಕೋಡಿ ಜಯನಾಯಕ್, ಎಸ್.ಯು.ಲಕ್ಷ್ಮಣ್ ನಾಯಕ್,ನಾಗೇಶ್ ಕೋಡಕಲ್,ಮೋಹನ್ ನಾಯಕ್ ಕಲ್ಪನೆ,ನಳಿನಿ ಎಸ್.ನಾಯಕ್ ಉಳಿಯ,ರೇಣುಕಾ ಕಲ್ಲಾಪು ,ಚೇತನ್ ರಾಜ್ ಮೊದಲಾದವರಿದ್ದರು.ಮಠದ ಗುರುರಾಜ್ ಭಟ್ ಸಹಕರಿಸಿದರು. ಇದಕ್ಕು ಮೊದಲು ಪಡುಬಿದ್ರೆ ಸಮೀಪದ ಎರ್ಮಾಳಿನಲ್ಲಿರುವ ಅದಮಾರು ಮೂಲಮಠಕ್ಕು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
