ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೇರ್ಪಡೆ ಪರ್ವ ಮುಂದುವರಿದಿದೆ. ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ಪಿಕ್ಸ್ ಅಗುತ್ತಿದ್ದಂತೆ ಮಂದಿ ನಿಕಟಪೂರ್ವ, ಮಾಜಿ ಪಂಚಾಯತ್ ಸದಸ್ಯರು,ತಾಪಂನ ಮಾಜಿ ಸದಸ್ಯರು ಸಹಿತ ಹಲವು ಸಕ್ರಿಯ ಕಾರ್ಯಕರ್ತರು ವಿಶೇಷವಾಗಿ ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು.
ಇದೀಗ ಗ್ರಾಪಂ ಚುನಾವಣೆಯ ಬಳಿಕವು ಹಿರಿಯ ಕಾಂಗ್ರೆಸಿಗ ಬಾಲಕೃಷ್ಣ ಶೆಟ್ಟಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರೆ, ಸೋಮವಾರವು ಉದ್ಯಮಿ ಬ್ರಿಜೇಶ್ ಕುಮಾರ್ ರೈ ಅಗರಿ,ವಕೀಲರಾದ ಸುಂದರ ಪೂಜಾರಿ.ಎಂ. ರವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬಿಜೆಪಿ ಧ್ವಜ ನೀಡಿ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಬಳಿಕ ಮಾತನಾಡಿದ ಶಾಸಕರು ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿ,ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯ ವೈಖರಿ,ಪಕ್ಷದ ತತ್ವ ,ಸಿದ್ದಾಂತವನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಂಟ್ವಾಳಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ.ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ.ಪ್ರಮುಖರಾದ ಮಾಧವ ಮಾವೆ.ಸುದರ್ಶನ್ ಬಜ.ಸುರೇಶ್ ಕೋಟ್ಯಾನ್.ದೇವಿದಾಸ್ ಶೆಟ್ಟಿ.ಕೇಶವ ಕಾಮಾಜೆ.ಪುರುಷೋತ್ತಮ ಶೆಟ್ಟಿ.ವಿಶ್ವನಾಥ ಕಲಾಯಿ ಮೊದಲಾದವರು ಉಪಸ್ಥಿತರಿದ್ದರು.
