ಬಂಟ್ವಾಳ: ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಪುಂಜಾಲಕಟ್ಟೆ ಘಟಕದ ತೃತೀಯ ವಾರ್ಚಿಕೋತ್ಸವವು ದಶಂಬರ್ 25 ರಂದು ಸಂಜೆ 5 ಗಂಟೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಲಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಭಾಧ್ಯಕ್ಷತೆ ವಹಿಸುವರು.

ಯಕ್ಷದ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ,ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ,ಪದ್ಮಶೇಖರಜೈನ್ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ  ತಾಳಮದ್ದಳೆ ಆರ್ಥಧಾರಿ ಉಮೇಶ್ ಪೂಜಾರಿ ಅವರನ್ನು ಗೌರವಿಸಲಾಗುವುದು ಎಂದು  ಪೌಂಡೇಶನ್ ನ ಪುಂಜಾಲಕಟ್ಟೆ ಘಟಕದ ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ ಹಾಗೂ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳಿಕ ಪುಂಜಾಲಕಟ್ಟೆ’ ಯಕ್ಷದ್ರುವ’ ಮಕ್ಕಳ ಕಲಾತಂಡದಿಂದ ಹಾಗೂ ಪಾವಂಜೆ ಕ್ಷೇತ್ರದ ಮೇಳದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *