ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ಟೌನ್ ತಂಡವು ರೋಟರಿ ವಲಯ 4ರ ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್ ಗಳಿಸಿದೆ. ಮೂಡುಬಿದಿರೆ ರೋಟರಿ ಕ್ಲಬ್ ರನ್ನರ್ಸ್ ಅಪ್ ಗಳಿಸಿದೆ. ವಿಶಾಲ್ ಬೆಸ್ಟ್ ಬ್ಯಾಟ್ಸ್ಮೆನ್, ಪುನೀತ್ ಬೆಸ್ಟ್ ಬೌಲರ್ ಹಾಗೂ ನಾಗರಾಜ್ ಮ್ಯಾನ್ ಆಫ್ ದ ಸೀರಿಸ್ ಗಳಿಸಿದರು.

ರೋಟರಿ ಕ್ಲಬ್ ಬಂಟ್ವಾಳ ಮತ್ತು ಲೊರೆಟ್ಟೋ ಹಿಲ್ಸ್ ನೇತೃತ್ವದಲ್ಲಿ ಲೊರೆಟ್ಟೋ ಚರ್ಚ್ ಮೈದಾನದಲ್ಲಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಲಯ 4ರ ಜಿಲ್ಲಾ ಉಪರಾಜ್ಯಪಾಲ ಡಾ.ಯತಿಕುಮಾರ್ ಸ್ವಾಮಿ ಗೌಡ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಹೆಗ್ಡೆ, ಲೊರೆಟ್ಟೋ ಹಿಲ್ಸ್ನ ಅಧ್ಯಕ್ಷ ಆ್ಯಂಟನಿ, ವಲಯ ಸಭಾಪತಿಗಳಾದ ಜಯರಾಮ ರೈ, ಜಯರಾಮ ಬಂಗೇರ, ಕ್ರೀಡಾ ಸಂಯೋಜಕ ನಾಗರಾಜ ಬಿ. ಬಹುಮಾನ ವಿತರಿಸಿದರು. ವಲಯದ 11 ಕ್ಲಬ್ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು.
