ಬಂಟ್ವಾಳ:“ಕುಂಭ ಅಭಿವೃದ್ಧಿ ನಿಗಮ “ಸ್ಥಾಪಿಸುವಂತೆ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಬಂಟ್ವಾಳ ತಹಶೀಲ್ದಾರರ ಮೂಲಕ ಸೋಮವಾರ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಂದರ್ ಬಿ. ಯವರ ನೇತೃತ್ವದ ನಿಯೋಗ ತಹಶೀಲ್ದಾರರನ್ನು ಭೇಟಿಯಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಕುಲಾಲ ಸಮಾಜವು ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿಗಾಗಿ ನಿಗಮವೊಂದನ್ನು ಸ್ಥಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿಯೋಗದಲ್ಲಿ ಕಾರ್ಯದರ್ಶಿ ಶೇಷಪ್ಪ ಮಾಸ್ಟರ್, ಉಪಾಧ್ಯಕ್ಷರಾದ ಸೋಮಯ್ಯ ಅನಿಲಡೆ, ಪದಾಧಿಕಾರಿಗಳಾದ ಸೋಮಪ್ಪ ಮೂಲ್ಯ, ಶೀನ ಮೂಲ್ಯ ಅಲ್ಲಿಪಾದೆ, ಓಬಯ್ಯ ಮೂಲ್ಯ, ವಿಠ್ಠಲ ಮೂಲ್ಯ ಜಕ್ರಿಬೆಟ್ಟು, ಕೃಷ್ಣಶ್ಯಾಮ್ ಹಾಗೂ ಕೃಷ್ಣಪ್ಪ ಮೂಲ್ಯ ಜೊತೆಗಿದ್ದರು
