ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಮಂಗಳೂರು ಕರ್ನಾಟಕ ಇದರ ಹೃದಯವಂತರು-2020 ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ ಸಂಘಟನೆ ಯ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ ಬಜಪೆ ಘಟಕ ಸ್ಪಂದನ ತಂಡದ ಯಶಸ್ವಿ 50ನೇ ಸೇವಾ ಯೋಜನೆ ಬೆಳ್ಮ ದೇರಳಕಟ್ಟೆ ಸೇವಾಶ್ರಮಕ್ಕೆ ಭೇಟಿ ನೀಡಿ ಡಿ.13ರಂದು ಭಾನುವಾರ ಬೇಟಿ ನೀಡಿ TV ಹಸ್ತಾಂತರ ಮಾಡಲಾಯಿತು.
ಬಿರುವೆರ್ ಕುಡ್ಲ ಬಜಪೆ ಘಟಕಕ್ಕೆ ಬೆಳ್ಮ ದೇರಳಕಟ್ಟೆ ಸೇವಾಶ್ರಮದ ವ್ಯವಸ್ಥಾಪಕರಾದ ಶ್ರೀಮತಿ ಗೀತಾ ಆರ್ ಶೆಟ್ಟಿ ಮನವಿ ನೀಡಿದ್ದರು. ಆಶ್ರಮದಲ್ಲಿ ಇರುವ ವೃದ್ಧ ತಾಯಂದಿಯರಿಗೆ ಮನೋರಂಜನೆ ನೀಡಲು ಹಾಗೂ ಅವರಿಗೆ ದಿನದ ಕೆಲ ಸಮಯ TV ನೋಡುತ್ತಾ ಕಾಲ ಕಳೆಯಲು ವೃದ್ಧಾ ತಾಯಂದಿಯರಿಗೆ ಅವಶ್ಯಕತೆ ಇತ್ತು. ಸೇವಾಶ್ರಮದ ಮನವಿಯನ್ನು ತಕ್ಷಣವೇ ಸ್ಪಂದಿಸಿದ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ ಸದಸ್ಯರು ಬೆಳ್ಮ ದೇರಳಕಟ್ಟೆ ಸೇವಾಶ್ರಮಕ್ಕೆ 40 “inch ನ TV ಯನ್ನು 50ನೇ ಸೇವಾ ಯೋಜನೆಯಡಿ ಹಸ್ತಾಂತರಿಸಲಾಯಿತು. ಹಾಗೂ ಅವರಿಗೆ ಒಂದು ದಿನದ ಸಂಪೂರ್ಣ ಊಟದ ವ್ಯವಸ್ಥೆ ಮಾಡಿ ಹಣ್ಣು ಹಂಪಲುಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಶಿವರಾಮ್ ಕೋಟ್ಯಾನ್ ಪೆರ್ಮುದೆ, ಸೇವಾಶ್ರಮದ ಅತಿಕ್ ಶೆಟ್ಟಿ, ಸುಮನ್ ಶೆಟ್ಟಿ, ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆಂಜಾರು ಕಾನ, ಉಪಾಧ್ಯಕ್ಷರುಗಳಾದ ಚಂದ್ರಶೇಖರ್ ಅಮೀನ್, ಚಂದ್ರ ಪೂಜಾರಿ ಪೆರಾರ, ಗೌರವ ಅಧ್ಯಕ್ಷ ಶರತ್ ಪೂಜಾರಿ ಬಜಪೆ, ಕಾರ್ಯಾಧ್ಯಕ್ಷ ಗಣೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸೂರಜ್ ಪೂಜಾರಿ ಎಕ್ಕಾರು, ಕೋಶಾಧಿಕಾರಿ ರಾಕೇಶ್ ಅಂಚನ್, ಸಂಚಾಲಕರುಗಳಾದ ಸಂತೋಷ್ ಪೂಜಾರಿ ಕಂದಾವರ , ಕೀರ್ತನ್ ಅಮಿನ್ ಪೆರ್ಮುದೆ , ಜೀವನ್ ಪೂಜಾರಿ ಕೆಂಜಾರು ಕಾನ, ಗಣೇಶ್ ಪೂಜಾರಿ ಕಟೀಲು ಹಾಗೂ ಮತ್ತು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
