ಬಂಟ್ವಾಳ: ಯಕ್ಷಗಾನ ಕಲೆ ತುಳುನಾಡಿನ ಕೊಡುಗೆಯಾಗಿದೆ ಎಂದು ನಿವೃತ್ತ ಶಿಕ್ಷಕ  ವಿದ್ವಾನ್ ಕೆ.ಲಕ್ಷ್ಮೀ ನಾರಾಯಣ ಆಚಾರ್ಯ ಅವರು ಹೇಳಿದರು.ಅವರು ರವಿವಾರ ಬಂಟ್ವಾಳ ತಾ. ಕಾವಳಪಡೂರು ಗ್ರಾಮದ ಮಧ್ವ ಯಕ್ಷ ಕೂಟದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.ಮಧ್ವಾಚಾರ್ಯರು ಯಕ್ಷಗಾನ ಕಲೆಯ ಬೀಜವನ್ನು ಬಿತ್ತಿದವರು. ಬಳಿಕ ಪಾರ್ತಿ ಸುಬ್ಬನಿಂದ ಪೋಷಿಸಲ್ಪಟ್ಟಿದ್ದರಿಂದ ಯಕ್ಷಗಾನ ಕಲೆ ತುಳುನಾಡಿನ ಹೆಮ್ಮೆಯ ಕೊಡುಗೆಯಾಗಿದ್ದು, ಇದನ್ನು ಬೆಳೆಸಿ, ಉಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದರು.IMG-20201213-WA0028
ಮಧ್ವಾಚಾರ್ಯರು ನಡೆದಾಡಿದ, ವಿಶ್ರಮಿಸಿದ ಮಧ್ವದಲ್ಲಿ ಯಕ್ಷಗಾನ ನಿರಂತರವಾಗಿ ಸಾಗಲಿ, ಯಕ್ಷ ಕೂಟದ ಕಾರ್ಯ ಅಭಿನಂದನೀಯ ಎಂದರು.ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅವರು ಶುಭಹಾರೈಸಿದರು. ಕಾವಳಪಡೂರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಹಿರಿಯ ಯಕ್ಷಗಾನ ಅರ್ಥದಾರಿ ಡಿ.ತಿಮ್ಮಪ್ಪ ಶೆಟ್ಟಿ ಪಾತಿಲ, ಶಿರಡಿ ಉದ್ಯಮಿ ಲೋಕನಾಥ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಿತಿ ಪದಾಧಿಕಾರಿಗಳಾದ ಸಂಜೀವ ಶೆಟ್ಟಿ ಪಂಜಿಕಲ್ಲು, ರಾಜ್ ಪ್ರಸಾದ್ ಆರಿಗ, ಭಾನುಮತಿ ಶೆಟ್ಟಿ, ಗೋಪಾಲಕೃಷ್ಣ ಬಂಗೇರ, ಜಯಶಂಕರ ಉಪಾಧ್ಯಾಯ, ಭವಾನಿ ಶ್ರೀ ಧರ ಪೂಜಾರಿ, ನಾರಾಯಣ ಶೆಟ್ಟಿ, ಶಿವಪ್ಪ ಗೌಡ ನಿನ್ನಿಕಲ್ಲು, ನಾರಾಯಣ ಶೆಟ್ಟಿ, ಬೇಬಿ ಕುಂದರ್ ಮಧ್ವ, ನೂರುಲ್ಲಾ ಸಾಹೇಬ್, ರಮೇಶ್ ನಾಯ್ಕ್, ಸುಜಾತಾ ಶೆಟ್ಟಿ ಅವರು ಉಪಸ್ಥಿತರಿದ್ದರು.
ಶಿಕ್ಷಕ ಉದಯ ಕುಮಾರ್ ಜೈನ್ ಸ್ವಾಗತಿಸಿದರು. ಅಧ್ಯಕ್ಷ ಭಾಸ್ಕರ ಶೆಟ್ಟಿ ಪ್ರಸ್ತಾವಿಸಿದರು.ರತ್ನದೇವ್ ಪುಂಜಾಲಕಟ್ಟೆ ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು.

By suddi9

Leave a Reply

Your email address will not be published. Required fields are marked *