ಬಂಟ್ವಾಳ: ಬಂಟ್ವಾಳ ಯೋಜನಾ ಕಚೇರಿಗೆ ಸಂಬಂಧಪಟ್ಟಂತೆ ತಾಲೂಕಿನ ಅತ್ಯಂತ ಬಡ ಮತ್ತು ಅಶಕ್ತ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮತ್ತು ತಾಲೂಕಿನ ಯೋಜನಾಧಿಕಾರಿ ಜಯನಂದ ಪಿ ಬಂಟ್ವಾಳದಲ್ಲಿ ವಿತರಿಸಿದರು.
IMG-20201210-WA0043
ಪ್ರತಿ ಮನೆ ಭೇಟಿ ಸಮೀಕ್ಷೆ ಮಾಡಿ ಸದಸ್ಯರಿಗೆಅಗತ್ಯ ಬೇಡಿಕೆಇರುವ ವಸ್ತುಗಳನ್ನು ಅವರ ಮನೆಗೆ ತಲುಪಿಸುವ ಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಹಮ್ಮಿಕೊಂಡಿದ್ದಾರೆ. ವಾತ್ಸಲ್ಯ ಕಿಟ್ ನಲ್ಲಿ ಅಗತ್ಯ ಸಾಮಾಗ್ರಿಗಳಾದ ಉಡುಪುಗಳು ಅಡುಗೆ ಪಾತ್ರೆಗಳು ಬೆಡ್ ಶೀಟ್ ಇವೆ. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *