ಬಂಟ್ವಾಳ: ಪೊಳಲಿ ಶ್ರೀ ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ವತಿಯಿಂದ ಪಂಚಮವರ್ಷದ 72 ಗಂಟೆಗಳ ಆಹೋರಾತ್ರಿ ಏಕಾಹಭಜನಾ ಮಹೋತ್ಸವವು ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಡಿ.12-15 ರ ಸೂರ್ಯೋದಯದ ವರೆಗೆ ನಡೆಯಲಿದೆ ಎಂದುಭಜನಾ ಮಂಡಳಿಯ ಯಶೋಧರ ಅಡ್ಡೂರು ತಿಳಿಸಿದ್ದಾರೆ.

IMG-20201208-WA0027

ಮಂಗಳವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಡಿ.12 ರಂದು ಸೂರ್ಯೋದಯ ಸಮಯದಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ದೀಪಪ್ರಜ್ವಲನೆಗೈದು ಭಜನಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

15 ರಂದು ಸೂರ್ಯೋದಯಕ್ಕೆ ಭಜನಾ ಮಂಗಲೋತ್ಸವ ನಡೆಯಲಿದೆ ವಿವಿದೆಡೆಯ ಸುಮಾರು 38 ಭಜನಾ ತಂಡಗಳು ಈ ಭಜನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದೆ ಎಂದ ಅವರು ಡಿ.10ರಂದು ಸಂಜೆ ಪೊಳಲಿ ದೇವಸ್ಥಾನದಿಂದ ಶ್ರೀ ಅಖಿಲೇಶ್ವರ ದೇವಸ್ಥಾನದ ವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಈ ಭಜನಾ ಮಹೋತ್ಸವದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಮಾಣಿಲ ಶ್ರೀ ಮೋಹನದಾಸ್ ಸ್ವಾಮೀಜಿ ,ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರಭಟ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು,ಇದೇ ವೇಳೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಹಯೋಗದಲ್ಲಿ ಭಜನಾ ಸಮಾವೇಶ ಸಂಪನ್ನಗೊಳ್ಳಲಿದೆ.

ಭಜನಾಮಹೋತ್ಸವದ ಕೊನೆಗೆ “ಆನಂದ ಭಜನೆ” ಯು ನಡೆಯುವುದು. ಕೋವಿಡ್ ನಿಯಮವನ್ನು ಪಾಲಿಸಿಕೊಂಡು ಭಜನಾಮಹೋತ್ಸವ ನಡೆಸಲಾಗುತ್ತಿದೆ ಎಂದರು. ಭಜನಾ ಮಂಡಳಿಯ ಪದಾಧಿಕಾರಿಗಳಾದ ಹರೀಶ್ ಎಸ್.ಮಣಿಕಂಠಪುರ , ಸೂರ್ಲ ಸುಮನ್ ರಾಜ್ ಪೊಳಲಿ ಮಣಿಕಂಠಪುರ, ಮುರಳಿ ಪೊಳಲಿ ಉಪಸ್ಥರಿದ್ದರು.

By suddi9

Leave a Reply

Your email address will not be published. Required fields are marked *