ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ದಕಟ್ಟೆ ನಗರದ ಹಾಗೂ ಬಂಟ್ವಾಳ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಅಂಗವಾಗಿ ಸಾಮಾಜಿಕ ಸಾಮರಸ್ಯ ದಿನವನ್ನಾಗಿ ಆಚರಿಸಲಾಯಿತು.ಸಿದ್ದಕಟ್ಟೆಯಲ್ಲಿ ಅಶ್ವಿನಿ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ಲೇಖಕರಾದ ಡಾ. ಯೋಗೀಶ್ ಕೈರೊಡಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಬಡತನ ಹಾಗೂ ಇತರ ಅಡೆತಡೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು,ನಾವು ಅದನ್ನೆಲ್ಲವನ್ನು ಮೆಟ್ಟಿ ಹೇಗೆ ಸಾಧನೆಯ ಶಿಖರವನ್ನೇರಬೇಕು ಎಂಬುದನ್ನು ಡಾ ಬಿ ಆರ್ ಅಂಬೇಡ್ಕರ್ ರವರನ್ನು ನೋಡಿ ಕಲಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನ ಮಂಗಳೂರು ಜಿಲ್ಲಾ ಸಂಚಾಲಕರಾದ ಹರ್ಷಿತ್ ಕೊಯಿಲ, ತಾಲೂಕು ಸಂಚಾಲಕರಾದ ದಿನೇಶ್ ಕೊಯಿಲ, ನಗರ ಕಾರ್ಯದರ್ಶಿ ಗುರುಪ್ರಸಾದ್,ನಗರ ಸಹಕಾರ್ಯದರ್ಶಿ ಶಿವಕುಮಾರ್, ಕಾರ್ಯಕರ್ತರಾದ ಕಿರಣ್,ಪ್ರಜ್ವಲ್, ನಿಶಾ,ಜಯಲಕ್ಷ್ಮಿ,ವಿಕ್ಷೀತಾ,ಅನುಶಾ,
ಬಿ.ಸಿ.ರೋಡಿನಲ್ಲಿ ಪುಣ್ಯಸ್ಮರಣೆ
ಹಾಗೆಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಬಿ.ಸಿ ರೋಡಿನ ಶಿಶುಮಂದಿರದಲ್ಲಿ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ನಗರ ಅಧ್ಯಕ್ಷ, ಉಪನ್ಯಾಸಕರಾದ ಡಾ.ರಮಾನಂದ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಂಬೇಡ್ಕರ್ ರವರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು,ಸಮಾಜದ ತೊಡಕುಗಳ ನಡುವೆ ಅದಮ್ಯ ಚೇತನವಾಗಿ ಬೆಳೆದು ಬಂದ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪುಣ್ಯಸ್ಮರಣೆಯನ್ನು, ಸಾಮಾಜಿಕ ಸಾಮರಸ್ಯ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನ ಮಂಗಳೂರು ಜಿಲ್ಲಾ ಸಂಚಾಲಕರಾದ ಹರ್ಷಿತ್ ಕೊಯಿಲ, ತಾಲೂಕು ಸಂಚಾಲಕರಾದ ದಿನೇಶ್ ಕೊಯಿಲ, ತಾಲೂಕು ಸಹ ಸಂಚಾಲಕರಾದ ಅಖಿಲಾಶ್ , ನಗರ ಸಹಕಾರ್ಯದರ್ಶಿ ಅನೀಶ್ ಚೇಳೂರು ವೆಂಕಟೇಶ್ ನಾಯಕ್, ಗಗನ್ ,ನಿಖಿಲ್,ಶಿವಪ್ರಸಾದ್ , ರಂಜಿತ್ ,ಪ್ರಶಾಂತ್ , ಪ್ರಿತೇಶ್ ಮತ್ತಿತರು ಉಪಸ್ಥಿತರಿದ್ದರು.
