ಬಂಟ್ವಾಳ :ತಾಲೂಕಿನ ನೆತ್ತರಕೆರೆ ಸಮೀಪದ  ಗೋವಿಂದೋಟ ಎಂಬಲ್ಲಿ ಸ್ಥಳೀಯ ಯುವಕರೇ ಶ್ರಮದಾನ ಹಾಗೂ ದಾನಿಗಳ ನೆರವಿನಿಂದ ಸಂಪರ್ಕ ರಸ್ತೆಯನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದರು. ಸಮಾಜ  ನಮಗೇನು ಕೊಟ್ಟಿದೆ ಎನ್ನುದಕ್ಕಿಂತ, ನಾವೇನು ಸಮಾಜಕ್ಕೆ ಕೊಟ್ಟಿದ್ದೇವೆ ಎನ್ನುದನ್ನು ಮನಗಂಡು ಗೋವಿಂದೋಟದ  ಯುವಕರು ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಗೈದು ಸಮಾಜಕ್ಕೆ ಮಾದರಿಯಾಗಿದ್ದಾರೆ,  ಊರಿನ ಹಿರಿಯರಾದ ಜಯ ಆಚಾರಿ ಅವರು ರಸ್ತೆಯನ್ನು  ಉದ್ಘಾಟಿಸಿ ಲೋಕಾರ್ಪಣೆಗೈದರು.IMG-20201130-WA0030

ಈ ಸಂದರ್ಭ ಪುದು ಪಂಚಾಯತ್ ಸದಸ್ಯರಾದ ಸಂತೋಷ್ ನೆತ್ತರಕೆರೆ, ಉದ್ಯಮಿ ಸಂತೋಷ್ ಕುಮಾರ್ ಕೊಡ್ಮಣ್ , ಗೋಪಾಲ್ ಗೋವಿಂದೋಟ, ಲಿಖಿತ್ ಗೋವಿಂದೋಟ,  ಪದ್ಮನಾಭ ಗೋವಿಂದೋಟ ಮೊದಲಾದವರು ಉಪಸ್ಥಿತರಿದ್ದರು..

By suddi9

Leave a Reply

Your email address will not be published. Required fields are marked *