ಶ್ರೀನಿವಾಸಪುರ : ವಿದ್ಯಾರ್ಥಿನಿಯರು ಅವಿರತ ಪ್ರಯತ್ನದಿಂದ ನಿಗದಿತ ಗುರಿ ತಲುಪಬೇಕು ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಆರ್‌.ಮಾಧವಿ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿನಿರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮಾತನಾಡಿ,  ವಿದ್ಯಾರ್ಥಿನಿಯರು ಓದುವ ಅವಧಿಯಲ್ಲಿ ಸುಖಕ್ಕೆ ಹಾತೊರೆಯದೆ ಶ್ರಮವಹಿಸಿ ಅಭ್ಯಾಸ ಮಾಡಬೇಕು ಎಂದು ಹೇಳಿದರು.
27svp1ep
  ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಎನ್‌.ಶ್ರೀಧರ್‌ ಮಾತನಾಡಿ, ಕಾಲೇಜಿನ ಹಳೆ ವಿದ್ಯಾರ್ಥಿನಿಯರು, ಶಾಲೆಯ ವಿದ್ಯಾರ್ಥಿನಿಯರ ಸಾಧನೆಯನ್ನು ಗುರುತಿಸಿ ಪುರಸ್ಕರಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ಡಾ. ಚಂದ್ರಕಲಾ ನಗದು ಬಹುಮಾನ ನೀಡಿದರು.ಹಳೆಯ ವಿದ್ಯಾರ್ಥಿನಿಯರಾದ ಎಂಜಿನಿಯರ್‌ ಸುನಂದ, ಬ್ಯಾಂಕ್ ವ್ಯವಸ್ಥಾಪಕಿ ಮಾಧವಿ, ಪ್ರೌಢ ಶಾಲಾ ಶಿಕ್ಷಕಿಯರಾದ ಜಯಲಕ್ಷ್ಮಮ್ಮ, ಕೆ.ವಿ.ಶಾರದಮ್ಮ, ರಾಜೇಶ್ವರಿ, ಯಾಸ್ಮಿನ್‌ ತಾಜ್‌, ಆದಿಲಕ್ಷ್ಮಮ್ಮ, ಪದ್ಮಜ, ಆಶಾ ಇದ್ದರು.

By suddi9

Leave a Reply

Your email address will not be published. Required fields are marked *