ಕೋಲಾರ: ತಾಲ್ಲೂಕಿನ ವೇಮಗಲ್-ಕುರಗಲ್ ಗ್ರಾಮ ಪಂಚಾಯಿತಿಗಳು ಮತ್ತು ಚೌಡದೇನಹಳ್ಳಿ ಗ್ರಾಪಂನ ಕಲ್ವ, ಚಿಕ್ಕವಲ್ಲಬ್ಬಿ, ಮಂಜಲಿ, ಶೆಟ್ಟಿಹಳ್ಳಿ ಗ್ರಾ.ಪಂನ ಪುರಹಳ್ಳಿಗಳನ್ನು ಒಟ್ಟುಗೂಡಿಸಿ ವೇಮಗಲ್ ಕೈಗಾರಿಕಾ ಪ್ರದೇಶವನ್ನೂ ಒಳಗೊಂಡAತೆ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ರಚನೆಗೆ ಒಪ್ಪಿಗೆ ನೀಡಿರುವ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸದಸ್ಯರಿಗೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಈ ಭಾಗದ ಜನರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.

28kolar2

ಇಂದಿನ ಸಚಿವ ಸಂಪುಟದಲ್ಲಿ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ರಚನೆಗೆ ಒಪ್ಪಿಗೆ ಸಿಗುತ್ತಿದ್ದಂತೆ ತಮ್ಮ ಮನವಿ ಹಾಗೂ ಒಂದು ವರ್ಷದ ಪ್ರಯತ್ನಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮತ್ತು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿರುವ ಅವರು, ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುವ ಹಿನ್ನಲೆಯಲ್ಲಿ ರಾಜಧಾನಿಯ ಹೊರವಲಯದಲ್ಲಿ ಚಿಕ್ಕಪಟ್ಟಣಗಳ ಅಭಿವೃದ್ದಿ ಜರೂರಾಗಿದೆ ಎಂದು ತಿಳಿಸಿದ್ದಾರೆ. ರಾಜಧಾನಿಗೆ ಒಂದು ಗಂಟೆ ಅವಧಿಯಲ್ಲಿ ತಲುಪುವ ಅಂತರದಲ್ಲಿ ವೇಮಗಲ್ ಇದೆ ಎಂದು ತಿಳಿಸಿರುವ ಅವರು, ಇದು ಜಿಲ್ಲೆಯ ಏಕೈಕ ಪಟ್ಟಣ ಪಂಚಾಯಿತಿಯಾಗಲಿದೆ ಎಂದು ತಿಳಿಸಿದ್ದಾರೆ. ಈ ಭಾಗದ ಜನರ ಅಭಿಪ್ರಾಯ ಪಡೆದು, ಇಲ್ಲಿನ ಅಭಿವೃದ್ದಿ ಜತೆಗೆ ವೇಮಗಲ್ ಕೈಗಾರಿಕಾ ಪ್ರದೇಶ ದೊಡ್ಡಮಟ್ಟದಲ್ಲಿ ಅಭಿವೃದ್ದಿಯಾಗಲಿ ಎಂಬ ದೃಷ್ಟಿಯಿಂದ ಪಟ್ಟಣ ಪಂಚಾಯಿತಿ ರಚನೆಗೆ ಪ್ರಯತ್ನ ಮಾಡಿದ್ದಾಗಿ ತಿಳಿಸಿದ್ದಾರೆ.

ತಮ್ಮ ಪ್ರಯತ್ನಕ್ಕೆ ಪೂರಕವಾಗಿ ಜಿಲ್ಲಾಡಳಿತ, ಜಿಪಂ ಸ್ಪಂದನೆ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿರುವ ಅವರು, ಕೋಲಾರ ಜಿಲ್ಲಾಡಳಿತ,ಜಿಪಂ ವೇಮಗಲ್,ಕುರಗಲ್,ಶೆಟ್ಟಿಹಳ್ಳಿ, ಚೌಡದೇನಹಳ್ಳಿ ಗ್ರಾಮ ಪಂಚಾಯಿತಿಗಳು, ತಾಲ್ಲೂಕು ಪಂಚಾಯಿತಿ ಇವರುಗಳ ಅಭಿಪ್ರಾಯ, ಅಂಕಿ ಅಂಶಗಳ ಆಧಾರದ ಮೇಲೆ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ರಚನೆಗೆ ಕಳೆದ ಜನವರಿಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.ಮುಖ್ಯಮಂತ್ರಿಗಳು ತಮ್ಮ ಮನವಿಗೆ ಸ್ಪಂದಿಸಿ ನೀಡಿದ ನಿರ್ದೇಶನದ ಅನ್ವಯ ಪೌರಾಡಳಿತ ನಿರ್ದೇಶನಾಲಯವು ಪೌರಾಡಳಿತ ಸಚಿವರು, ಸಚಿವಾಲಯ,ನಿರ್ದೇಶಕರು, ಗ್ರಾಮೀಣಾಭಿವೃದ್ದಿ ಸಚಿವರು ಮತ್ತು ಸಚಿವಾಲಯದ ಅನುಮತಿ ಪಡೆದು ಹಣಕಾಸು ಇಲಾಖೆಗೆ ಒಪ್ಪಿಗೆಗೆ ಕಳುಹಿಸಿದ್ದು, ಇದೀಗ ಸಚಿವ ಸಂಪುಟವೂ ಅನುಮೋದಿಸಿದೆ.28kolar1

ಈ ಭಾಗದ ಅಭಿವೃದ್ದಿಯ ದೃಷ್ಟಿಯಿಂದ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ವೇಮಗಲ್-ಕುರಗಲ್ ಗ್ರಾ.ಪಂಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ತೀರ್ಮಾನ ಕೈಗೊಂಡಿರುವುದಕ್ಕಾಗಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ, ಸಂಪುಟ ಸದಸ್ಯರು, ಮುಖ್ಯ ಕಾರ್ಯದರ್ಶಿಗಳು, ಪೌರಾಡಳಿತ ಇಲಾಖೆ ಕಾರ್ಯದರ್ಶಿಗಳು, ನಿರ್ದೇಶಕರು, ಗ್ರಾಮೀಣಾಭಿವೃದ್ದಿ ಇಲಾಖೆ, ಹಣಕಾಸು ಸಚಿವಾಲಯ ಮತ್ತು ಸಚಿವರಿಗೆ ಧನ್ಯವಾದ ಸಲ್ಲಿಸಿದ್ದಾರೆ.ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳು ಬಂದಿರುವ ಹಿನ್ನಲೆಯಲ್ಲಿ ಇಲ್ಲಿನ ಅಭಿವೃದ್ದಿಯ ವೇಗ ಹೆಚ್ಚಬೇಕಾಗಿದೆ, ಇಲ್ಲಿನ ಜನಸಂಖ್ಯೆ, ಆದಾಯವನ್ನು ಪರಿಗಣಿಸಿ ರಾಜ್ಯ ಸರ್ಕಾರ ಇದೀಗ ಪಟ್ಟಣ ಪಂಚಾಯಿತಿ ರಚನೆಗೆ ಅವಕಾಶ ಕಲ್ಪಿಸಿದ್ದು, ಈ ಭಾಗದ ಸಮಗ್ರ ಅಭಿವೃದ್ದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನಸಂಖ್ಯೆ,ಅಭಿವೃದ್ದಿ ಮತ್ತು ಆಧಾಯದ ಆಧಾರದ ಮೇಲೆ ಪಟ್ಟಣ ಪಂಚಾಯಿತಿ ರಚನೆ ಸೂಕ್ತವಾಗಿದೆ, ವಿಮಾನ ನಿಲ್ದಾಣಕ್ಕೂ ಹತ್ತಿರವಿದ್ದು, ಈ ಸಂಬAಧ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಕೋಲಾರ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಪಂ ಅಧ್ಯಕ್ಷರು, ತಾಲ್ಲೂಕು ಪಂಚಾಯಿತಿ, ತಾಪಂ ಅಧ್ಯಕ್ಷರು, ವೇಮಗಲ್,ಕುರಗಲ್, ಚೌಡದೇನಹಳ್ಳಿ,ಶೆಟ್ಟಿಹಳ್ಳಿ ಗ್ರಾ.ಪಂಗಳ ಆಡಳಿತಾಧಿಕಾರಿಗಳು,ಸಿಬ್ಬಂದಿ, ಈ ಭಾಗದ ಜನತೆಗೆ ಸುದರ್ಶನ್ ಧನ್ಯವಾದ ಸಲ್ಲಿಸಿದ್ದಾರೆ.ನೂತನ ಪಟ್ಟಣ ಪಂಚಾಯಿತಿಯಾಗಲಿರುವ ವೇಮಗಲ್-ಕುರಗಲ್‌ಗೆ ಅಗತ್ಯ ಮೂಲಸೌಲಭ್ಯಗಳು, ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಕೇಂದ್ರ,ರಾಜ್ಯ ಸರ್ಕಾರ, ಜಿಲ್ಲಾಡಳಿತ,ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಸಹಕಾರ ನೀಡುವ ಮೂಲಕ ವೇಮಗಲ್-ಕುರಗಲ್‌ಅನ್ನು ಮಾದರಿ ಪಟ್ಟಣ ಪಂಚಾಯಿತಿಯಾಗಿ ಅಭಿವೃದ್ದಿಪಡಿಸಲು ಅಗತ್ಯ ಆರ್ಥಿಕ ನೆರವು, ಆಗತ್ಯ ಯೋಜನೆಗಳನ್ನು ಆದ್ಯತೆಯ ಮೇಲೆ ಜಾರಿಗೊಳಿಸಲು ಮನವಿ ಮಾಡಿದ್ದಾರೆ.ಕೋಲಾರ ಜಿಲ್ಲೆಯ ಪ್ರಥಮ ಪಟ್ಟಣ ಪಂಚಾಯಿತಿಯಾಗಿ ಘೋಷಣೆಯಾಗಿರುವ ವೇಮಗಲ್,ಕುರಗಲ್ ಗ್ರಾ.ಪಂಗಳು, ಶೆಟ್ಟಿಹಳ್ಳಿ,ಚೌಡದೇನಹಳ್ಳಿ ಗ್ರಾ.ಪಂಗಳ ಕೆಲವು ಗ್ರಾಮಗಳನ್ನೊಳಗೊಂಡ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ನಕ್ಷೆ.ವೇಮಗಲ್-ಕುರಗಲ್‌ಅನ್ನು ಕೋಲಾರ ಜಿಲ್ಲೆಯ ಪ್ರಥಮ ಪಟ್ಟಣ ಪಂಚಾಯಿತಿಯಾಗಿಸಲು ಶ್ರಮಿಸಿದ ಮಾಜಿ ಸಭಾಪತಿ ವಿ.ಆರ್.ಸುದರ್ಶನ್.

By suddi9

Leave a Reply

Your email address will not be published. Required fields are marked *