ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿರವರು ನೆರೆವೇರಿಸಿದರು. ಗ್ರಾಮದ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಎಂಬ ಪರಿಕಲ್ಪನೆ ಆಶಯದಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಜನರ ಬೇಡಿಕೆಗನುಗುಣವಾಗಿ ಅಭಿವೃದ್ಧಿ ಕೆಲಸ ಆಗುತ್ತಿದ್ದು ಈಗಾಗಲೇ ಬಡಗಬೆಳ್ಳೂರು ಗ್ರಾನದಲ್ಲಿ ಕೋಟ್ಯಾಂತರ ಕೆಲಸ ಆಗಿದೆ.
ಈ ದಿನ ಸುಮಾರು ರೂ.೫೦ ಲಕ್ಷದ ಉದ್ಫಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಆಗಿದ್ದು ಮುಂದಿನ ದಿನಗಳಲ್ಲಿ ಬಡಗಬೆಳ್ಳೂರಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಾನು ಬದ್ದನಾಗಿರುತ್ತೇನೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿ, ತಾ.ಪಂ.ಸದಸ್ಯ ಯಶವಂತ ಪೊಳಲಿ, ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ, ಜಿಲ್ಲಾ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಸುದರ್ಶನ್ ಬಜ, ಪ್ರಕಾಶ್ ಆಳ್ವ, ಪ್ರಕಾಶ್ ಬೆಳ್ಳೂರು, ಉಮೇಶ್ ಶೆಟ್ಟಿ ಪರಿಮೊಗರು, ಮೋಹನ್ ಕೊಟ್ಟಾರಿ, ರಮೇಶ್ ಪೂಜಾರಿ, ರತ್ನಕಾರ್ ಕೋಟ್ಯಾನ್, ಅಶ್ವಥ್ ಬಾಳಿಕೆ, ಗುಣಪಾಲ್ ಶೆಟ್ಟಿ ಪಲ್ಲಿಪಾಡಿ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಮಗಾರಿಗಳ ವಿವರ :-
೧. ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ಕಂಡದೊಟ್ಟು ರಸ್ತೆ ಅಭಿವೃದ್ಧಿ – ೫ ಲಕ್ಷ
೨. ಬಡಗಬೆಳ್ಳೂರು ಗ್ರಾಮದ ದೂಪೆಮಾರ್ ನಾಲಿಮಾರ್ ರಸ್ತೆ ಅಭಿವೃದ್ಧಿ – ೧೫ ಲಕ್ಷ
೩. ಬಡಗಬೆಳ್ಳೂರು ಗ್ರಾಮದ ಕೊಳತಮಜಲು ಸೈಟ್ ರಸ್ತೆ ಅಭಿವೃದ್ಧಿ – ೫ ಲಕ್ಷ
೪. ಬಡಗಬೆಳ್ಳೂರು ಗ್ರಾಮದ ಬಾಳಿಕೆ ರಸ್ತೆ ಅಭಿವೃದ್ಧಿ – ೧೦ ಲಕ್ಷ
೫. ಬಡಗಬೆಳ್ಳೂರು ಗ್ರಾಮದ ಬಟ್ಟಾಜೆ ರಸ್ತೆ ಅಭಿವೃದ್ಧಿ – ೫ ಲಕ್ಷ
೬. ಬಡಗಬೆಳ್ಳೂರು ಗ್ರಾಮದ ಶಿವನಗರ ರಸ್ತೆ ಅಭಿವೃದ್ಧಿ – ೫ ಲಕ್ಷ
೭. ಬಡಗಬೆಳ್ಳೂರು ಗ್ರಾಮದ ಕೊಪ್ಪಳ ರಸ್ತೆ ಅಭಿವೃದ್ಧಿ – ೫ ಲಕ್ಷ

