ಮೂಡುಬಿದಿರೆ: ಅಪ್ರಾಪ್ತೆಯ ಅತ್ಯಾಚಾರವೆಸಗಿದ ಆರೋಪದಲ್ಲಿ ಕಲ್ಲಮುಂಡ್ಕೂರಿನ ವ್ಯಕ್ತಿಯನ್ನು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಫೊಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಬಂಧಿತ ಆರೋಪಿಯನ್ನು ಸತೀಶ್ ಅಂಚನ್ ಎಂದು ಗುರುತಿಸಲಾಗಿದೆ. ಈತ ತಾಸೆ ವಾದಕ ಕೂಡ ಆಗಿದ್ದಾನೆನ್ನಲಾಗಿದೆ. ತನ್ನ ಊರಿನ ಅಪ್ರಾಪ್ತೆಯೊಬ್ಬಳ ಸ್ನೇಹವಾಗಿ ಆಕೆಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ.

ಜುಲೈನಲ್ಲಿ ಈಕೆ ಕಲ್ಲಮುಂಡ್ಕೂರಿನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಆರೋಪಿ ಸತೀಶ್ ಆಕೆಯನ್ನು ತನ್ನ ರಿಕ್ಷಾದಲ್ಲಿ ಬಲವಂತವಾಗಿ ಕುಳ್ಳಿರಿಸಿ ಕಲ್ಲು ಕ್ವಾರಿಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. `

ನಿನ್ನ ನಗ್ನ ಫೋಟೊ ನನ್ನಲ್ಲಿವೆ’ ಎಂದು ಯುವತಿಯನ್ನು ಬ್ಲ್ಯಾಕ್‍ಮೇಲ್ ಮಾಡಿದ್ದ ಅಲ್ಲದೆ ವಿಷಯವನ್ನು ಬಾಯಿ ಬಿಟ್ಟರೆ ನಿನ್ನನ್ನು ಮತ್ತು ಮನೆಯವರನ್ನು ಕೊಲ್ಲುವುದಾಗಿ ಯುವಕ ಬೆದರಿಸಿದ್ದ ಎನ್ನಲಾಗಿದೆ. ಯುವತಿ ಮನೆಯವರು ನೀಡಿದ ದೂರಿನಂತೆ ಮಂಗಳೂರಿನ ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್‍ಗೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

No photo

By suddi9

Leave a Reply

Your email address will not be published. Required fields are marked *