ಮೂಡುಬಿದಿರೆ,ಮ: ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಬ್ಯಾಂಕ್‍ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು ಕರ್ನಾಟಕ ಸರ್ಕಾರದ ಸಹಕಾರ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾಗಿರುವ `ಸಹಕಾರ ರತ್ನ’ ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ.

ವಿಧಾನಸೌದದ ಬ್ಯಾಂಕ್ವೆಟ್ ಹಾಲ್‍ನಲ್ಲಿ
ನ.14ರಂದು ನಡೆಯಲಿರುವ 67ನೇ ಸಹಕಾರ
ಸಪ್ತಾಹದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನಗೈಯಲಿದ್ದಾರೆ.

ಮೂರುವರೆ ದಶಕಗಳಿಂದ ಎಂಸಿಎಸ್ ಬ್ಯಾಂಕ್‍ನಲ್ಲಿ
ನಿರ್ದೇಶಕರಾಗಿದ್ದು ಉಪಾಧ್ಯಕ್ಷರಾಗಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುವ ಬಾಹುಬಲಿ
ಪ್ರಸಾದ್ ಮೂಡುಬಿದಿರೆ ವಕೀಲರ ಸಂಘದ
ಸ್ಥಾಪಕಾ ಅಧ್ಯಕ್ಷರೂ ಆಗಿದ್ದಾರೆ

By suddi9

Leave a Reply

Your email address will not be published. Required fields are marked *