ಮೂಡುಬಿದಿರೆ: ಜೇಸಿಐ ಹಿರಿಯ ತರಬೇತುದಾರ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ದಿ.ಗೋಪಾಲಕೃಷ್ಣ ಕಾಮತ್ ಅವರಿಗೆ ಮೂಡುಬಿದಿರೆ ರೋಟರಿ ಕ್ಲಬ್ ಹಾಗೂ ಜೆಸಿಐ ಮೂಡುಬಿದಿರೆ ತ್ರಿಭುವನ್‍ನಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜೇಸಿಐ ನಿಕಟಪೂರ್ವ ಅಧ್ಯಕ್ಷ ಪ್ರತಾಪ್ ಕುಮಾರ್ ಮಾತನಾಡಿ, ಜೆಸಿಐ ತರಬೇತುಗಳಿಗೆ, ಸಭೆಗಳಿಗೆ ಒಂದು ವ್ಯವಸ್ಥಿತ ಚೌಕಟ್ಟು ಮಾಡಿಕೊಟ್ಟವರು ಗೋಪಾಲಕೃಷ್ಣ ಕಾಮತ್. ವಿಕಲಚೇತನಾರಾಗಿದ್ದರೂ ಶಿಸ್ತಿನ ಜೀವನವನ್ನು ನಡೆಸಿದ್ದಾರೆ. ಅವರ ಜ್ಞಾನ ಸಂಪತ್ತು, ಸಂಘಟನಾತ್ಮಕ ಶಕ್ತಿ ಯುವ ಜೇಸಿಗಳಿಗೆ ಸ್ಪೂರ್ತಿ ಎಂದರು.
ರೋಟರಿ ಅಧ್ಯಕ್ಷ ಡಾ.ಸುದೀಪ್, ಜೇಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸಂತೋಷ್ ಕುಮಾರ್, ಹಸ್ದುಲ್ಲಾ ಇಸ್ಮಾಯಿಲ್, ಕೆ.ಆರ್ ಪಂಡಿತ್, ಎಂ.ಗಣೇಶ್ ಕಾಮತ್, ವಿನಯಚಂದ್ರ ನುಡಿನಮನ ಸಲ್ಲಿಸಿದರು.
ರೋಟರಿ ಕಾರ್ಯದರ್ಶಿ ಡಾ.ಅರವಿಂದ ಕಿಣಿ , ಜೆಸಿಐ ಕಾರ್ಯದರ್ಶಿ ದಯಾನಂದ ಹೆಗ್ಡೆ ಉಪಸ್ಥಿತರಿದ್ದರು.
