ಬಂಟ್ವಾಳ: ಸಜಿಪನಡು ಗ್ರಾಮ ಪಂಚಾಯತ್ ನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಬೆಂಬಲಿತರು ಐದು ವರ್ಷ ಅಧಿಕಾರ ನಡೆಸಿ, ಮಾದರಿ ಗ್ರಾಮವಾಗಿ ಕಾರ್ಯನಿರ್ವಹಿಸಿ ಉತ್ತಮ ಅಧಿಕಾರವನ್ನು ನೀಡಿದೆ.  ವಿವಿಧ ಯೋಜನೆಯಲ್ಲಿ   ಸುಮಾರು 1.25 ಕೋ.ರೂ ಹಾಗು ಉದ್ಯೋಗ ಖಾತರಿ ಯೋಜನೆಯಲ್ಲಿ ಸುಮಾರು 1 ಕೋಟಿಯಷ್ಟು ಖರ್ಚು ಮಾಡಿ ಅಭಿವೃದ್ಧಿ ಸಾದಿಸಿದೆ ಎಂದು ಗ್ರಾ ಪಂ.ನ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ನಾಸಿರ್ ತಿಳಿಸಿದ್ದಾರೆ.

IMG_20201103_160226ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕಳೆದ ಐದುವರ್ಷದ ಅಧಿಕಾರಾವಧಿಯಲ್ಲಿ ಮಾಡಿರುವ ಸಾಧನೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.   ಸಜಿಪನಡು ಗ್ರಾಮದಲ್ಲಿ ಮೂಲಭೂತ ಸೌಕರ್ಯವನ್ನು ಜನ ಮೆಚ್ಚುವ ರೀತಿಯಲ್ಲಿ ಮಾಡಲಾಗಿದೆಯಲ್ಲದೆ  ಇನ್ನಿತರ ಅಭಿವೃದ್ಧಿಯಲ್ಲಿಯೂ ಉತ್ತಮ ಕಾರ್ಯನಿರ್ವಹಿಸಿರುತ್ತದೆ. ನೀರು, ದಾರಿದೀಪ, ರಸ್ತೆ, ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿ ಜನರ ಆಶೋತ್ತರಗಳಿಗೆ ಐದು ವರ್ಷದ ಅವಧಿಯಲ್ಲಿ ಸ್ಪಂದಿಸಿದೆ ಎಂದು ವಿವರಿಸಿದರು.

ಗ್ರಾಮೋತ್ಸವದ ಮೂಲಕ ಮಕ್ಕಳ ಉಚಿತ ವೈದೈಕೀಯ ತಪಾಸನ ಶಿಭಿರ, ಹಿಜಾಮ ಚಿಕಿತ್ಸೆ, ಸ್ವಚ್ಚತಾ ಆಂದೋಲನ, ಕವಿಗೋಷ್ಟಿ ಮೊದಲಾದ ಕಾರ್ಯಕ್ರಮವನ್ನು ಮಾಡಿ ಜನಮನ್ನಣೆ ಗಳಿಸಿದೆ.ಸಜಿಪನಡು ಗ್ರಾಮದಲ್ಲಿ ಪೆಡಂಭೂತ ಸಮಸ್ಯೆಯಾದ ಬಂಟ್ವಾಳ ಪುರಸಭೆಯ ಘನತ್ಯಾಜ್ಯ ಘಟಕದ ವಿರುದ್ದ  ಹೋರಾಟ ಮಾಡಿ,  ಈ ಸಮಸ್ಯೆಗೆ ಪರಿಹಾರ ಒದಗಿಸಿದ್ದು, ಎಸ್.ಡಿ.ಪಿ.ಐ ಹಾಗು ಗ್ರಾ. ಪಂ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು. ಸಜಿಪನಡು ಗ್ರಾಮದ ನಾಗರಿಕರಿಗೆ ಸರಕಾರದ ಎಲ್ಲಾ ಸೌಲಭ್ಯಗಳನ್ನು ಒಂದೆಡೆ  ಕಲ್ಪಿಸುವ  ನಿಟ್ಟಿನಲ್ಲಿ ಸಜಿಪ ಒನ್-2020 ಎಂಬ ವ್ಯವಸ್ಥೆಯನ್ನು ತಂದಿರುವುದು ಗ್ರಾಮಸ್ಥರ ಪ್ರಶಂಶೆಗೆ ಪಾತ್ರವಾಗಿದೆ.

ಗ್ರಾಮ ಪಂಚಾಯತ್ ಅಭಿವೃದ್ದಿಯಿಂದ ಪ್ರೇರೇಪಣೆಯಾಗಿ ಮಂಗಳೂರು ಶಾಸಕರ ನಿಧಿಯಲ್ಲಿ ಇದುವರೆಗು ಆಗದಂಥ ಅಭಿವೃದ್ದಿ ಆಗಿರುವುದು ಗ್ರಾಮ ಪಂಚಾಯತ್‍ನ 5 ವರ್ಷದ ಅಧಿಕಾರಕ್ಕೆ ಅಭಿಮಾನವಾಗಿದೆ. ಜಿಲ್ಲಾ ಪಂಚಾಯತ್ ಅನುದಾನ, ವಿಧಾನ ಪರಿಷತ್ ಸದಸ್ಯರ ಅನುದಾನವೂ ಈ ಅವಧಿಯಲ್ಲಿ ಲಭ್ಯವಾಗಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು. ಗ್ರಾಮದ ಅಭಿವೃದ್ದಿಯಲ್ಲಿಪಕ್ಷದಿಂದಲು ಅನುದಾನಗಳು ಲಭ್ಯವಾಗಿದ್ದು,   ಉಚಿತ ಮಾಹಿತಿ ಮತ್ತು ಸೇವಾ ಕೆಂದ್ರ, ಬಸ್ ನಿಲ್ದಾಣ, ಹಲವು ಬೋರ್ ವೆಲ್ ವ್ಯವಸ್ಥೆ ಇದೆಲ್ಲವು ಪಕ್ಷದ ಕೊಡುಗೆಯಾಗಿದೆ ಹಾಗೆಯೇ ರಾಜ್ಯಮಟ್ಟದಲ್ಲಿಯೇ ಗಮನಸೆಳೆದ ಕಂಚಿನಡ್ಕ ಪದವಿನ ಹಿಂದು ರುದ್ರಭೂಮಿಯು ನಮ್ನ  ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿರುವುದು 5 ವರ್ಷದ ಅಭಿವೃದ್ಧಿಗೆ ಕನ್ನಡಿಯಗಿದೆ ಎಂದು ನಾಸೀರ್ ವಿವರಿಸೊದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ,  ಸಜಿಪನಡು ಗ್ರಾಮ ಚುನಾವಣ ಸಮಿತಿ ಅಧ್ಯಕ್ಷ ಎಸ್ . ಎನ್ ಅಬ್ದುಲ್ ರಹಿಮಾನ್,ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷ ನವಾಝ್ ಸಜಿಪ, ನೌಷಾದ್, ಇಕ್ಬಾಲ್ ಬೈಲಗುತ್ತು ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

By suddi9

Leave a Reply

Your email address will not be published. Required fields are marked *