ವಿಟ್ಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಭವಾನಿ ಫೌಂಡೇಶನ್ ಟ್ರಸ್ಟ್ ನ ಕುಸುಮೋಧರ ದೇರಣ್ಣ ಶೆಟ್ಟಿ ಚೆಲ್ಲಡ್ಕ ಇವರನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ಜೀರ್ಣೋದ್ಧಾರ ಮತ್ತು ಭ್ರಹ್ಮಕಲಶೋತ್ಸವ ಸಮಿತಿ ಇದರ ವತಿಯಿಂದ ಒಡಿಯೂರು ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಇವರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ಸಭಾಭವನದಲ್ಲಿ ಸನ್ಮಾನಿಸಿದರು.

ಭ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಸಾಲಿಯಾನ್. ದೇವಸ್ಥಾನ ದ ಆಡಳಿತ ಮೊಕ್ತೇಸರ ಸದಾಶಿವ ವೇದಿಕೆಯಲ್ಲಿ ಇದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್ ಎನ್ ಕೂಡೂರುಸ್ವಾಗತಿಸಿ, ಸುಬ್ರಾಯ ಪೈ ಧನ್ಯವಾದ ವಿತ್ತರು. ಯಶವಂತ ವಿಟ್ಲನಿರೂಪಿಸಿದರು.
