ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ.-ಉಡುಪಿ ಜಿಲ್ಲೆ – ಬಂಟ್ವಾಳ ವಲಯ ಇದರ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಬಂಟ್ವಾಳ ತಾಲೂಕಿನ ಮೂರು ವರ್ಷದೊಳಗಿನ ಮಕ್ಕಳಿಗೆ ಮುದ್ದುಕಂದ ಫೋಟೋ ಸ್ಪರ್ಧೆ ಆಯೋಜಿಸಿದೆ. ೬-೯ಗಾತ್ರದ ವಿವಿಧ ಭಂಗಿ ಗಳ ಭಾವಚಿತ್ರಗಳನ್ನು ಜನನ ಪತ್ರ , ವಿಳಾಸ ಮತ್ತು ಮೊಬೈಲ್ ನಂಬರಿನೊಂದಿಗೆ ಬಂಟ್ವಾಳ ತಾಲೂಕಿನ ಯಾವುದೇ ಸ್ಟುಡಿಯೋಗಳಲ್ಲಿ ನೀಡಬಹುದಾಗಿದೆ. ನವೆಂಬರ್ ೧೦ಕ್ಕೆ ಭಾವಚಿತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ವಿವರ ಗಳಿಗಾಗಿ ೯೪೪೮೩೯೪೪೧೯ , ೯೯೬೪೪೭೫೨೨೯ ನಂಬರನ್ನು ಸಂಪರ್ಕಿಸಬಹುದಾಗಿದೆ.
