ಬಂಟ್ವಾಳ: ಕಡೇಶ್ವಾಲ್ಯ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ 2.60 ಕೋ.ರೂ.ವಿನ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರು ಹೇಳಿದ್ದಾರೆ. ಭಾನುವಾರ ಸಂಜೆ ಕಡೇಶ್ವಾಲ್ಯ ಗ್ರಾಮದಲ್ಲಿ ಸುಮಾರು 1.70 ಕೋ.ರೂ.ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕರು, ನಮ್ಮ ಜಿಲ್ಲೆಗೆ ಕೇಳಿದನ್ನು ಒದಗಿಸುವ ರಾಜ್ಯದ ಕಾಮಧೇನು ಸಿಎಂ ಬಿ.ಎಸ್.ವೈ ಅವರ ಮೂಲಕ ಈ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿದರು. 
ಪ್ರತಿಯೊಂದು ಮತಗಳು ದೇಶದ ಅಭಿವೃದ್ಧಿ, ಪ್ರಗತಿಗೆ ಪೂರಕವಾಗಿರುತ್ತದೆ ಎಂಬ ದೃಷ್ಟಿಯಿಂದ ಮತ ಚಲಾಯಿಸಬೇಕು, ಮುಂದಿನ ಗ್ರಾ ಪಂ.ಚುನಾವಣೆಯಲ್ಲಿ ಅತ್ಯಧಿಕ ಸ್ಥಾನವನ್ನು ಗೆಲ್ಲಿಸಿ ಕಾಂಗ್ರೇಸ್ ಮುಕ್ತ ಕಡೇಶ್ವಾಲ್ಯವನ್ನಾಗಿಸಲು ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕೆಂದು ಕರೆನೀಡಿದರು. ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ.ಸದಸ್ಯೆ ಕಮಲಾಕ್ಷಿ ಪೂಜಾರಿ, ಬಂಟ್ವಾಳ ಕೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಗೋಳ್ತಮಜಲು ಮಾಹಶಕ್ತಿಕೇಂದ್ರದ ಅಧ್ಯಕ್ಷ ರಮನಾಥ ರಾಯಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಚುನಾವಣಾ ಸಹಪ್ರಭಾರಿ ಪ್ರಭಾಕರ ಪ್ರಭು, ಗ್ರಾ.ಪಂ.ಮಾಜಿ ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ,ಮಾಜಿ ಉಪಾಧ್ಯಕ್ಷ ಸುರೇಂದ್ರ ರಾವ್, ಪಕ್ಷದ ಪ್ರಮುಖರಾದ ವಿದ್ಯಾದರ ರೈ ಶಾಂತಪ್ಪ ಪೂಜಾರಿ, ತಿರುಮಲೇಶ್ ಭಟ್, ಸನತ್ ಆಳ್ವ, ಸಂಪತ್ ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ, ಶರತ್ ಕಡೇಶಿವಾಲಯ, ಸುರೇಶ್ ಬನಾರಿ, ಪರುಷೋತ್ತಮ ಶೆಟ್ಟಿ ವಾಮದಪದವು , ಗಣೇಶ್ ರೈ ಮಾಣಿ ಮತ್ತಿತರರು ಉಪಸ್ಥಿತಿ ರಿದ್ದರು.
ಕಾಮಗಾರಿ ಗಳ ವಿವರ
35 ಲಕ್ಷ ರೂ. ವೆಚ್ಚದಲ್ಲಿ ಪೆರ್ಲಾಪು ದಾದುಕೋಡಿ ರಸ್ತೆ ,
13 ಲಕ್ಷ ರೂ. ವೆಚ್ಚದಲ್ಲಿ ಖಂಡಿಗ ಗುಮ್ಮೋಡಿ ರಸ್ತೆ,
40 ಲಕ್ಷ ರೂ. ವೆಚ್ಚದಲ್ಲಿ ಬೊಳ್ಳಾರು ನೆತ್ತರ ಬೊಳ್ಳಾರು ಭಂಡಾರಿಬೆಟ್ಟುರಸ್ತೆ,
30 ಲಕ್ಷ ರೂ. ವೆಚ್ಚದಲ್ಲಿ ಚಿನ್ನಯಕಟ್ಟೆ- ಕಡರಕೋಳಿಮಜಲು ನಡ್ಯೇಲು,
20 ಲಕ್ಷ ರೂ. ವೆಚ್ಚದಲ್ಲಿ ಶೇರಾ ಶಾಲೆ ಬಳಿ ಜಡ್ತಿಲ ರಸ್ತೆ,
20 ಲಕ್ಷ ರೂ. ವೆಚ್ಚದಲ್ಲಿ ಪೆರ್ಲಾಪು ಅಮೈ,
10 ಲಕ್ಷ ರೂ. ವೆಚ್ಚದಲ್ಲಿ ಗುಡ್ಡಕೋಡಿ ಪಟ್ಲ ರಸ್ತೆ,
10 ಲಕ್ಷ ರೂ. ವೆಚ್ಚದಲ್ಲಿ ಗಡಿಯಾರ ಬಾನಗುಂಡಿ ರಸ್ತೆ ಅಭಿವೃದ್ದಿ
