ಬಂಟ್ವಾಳ:ಪೆರಾಜೆ ಶ್ರೀ ದೇವಿ ಭಜನಾ ಮಂದಿರದಲ್ಲಿ ಅ.31 ದಿಂದ ನ. 07 ರವರೆಗೆ ಭಜನಾ ತರಬೇತಿ ಶಿಬಿರ ನಡೆಯಲಿದ್ದು ಪೆರಾಜೆ ಗ್ರಾಮದ ಆಸಕ್ತ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಲು ಭಜನಾ ಮಂದಿರದ ಅಧ್ಯಕ್ಷ ಯತಿರಾಜ್ ಮಿತ್ತಪೆರಾಜೆ ತಿಳಿಸಿದ್ದಾರೆ.

ಆಧುನಿಕ ಜಗತ್ತಿನ ಜೀವನಶೈಲಿ, ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಮುಂದಿನ ಪೀಳಿಗೆ ದೇವರನ್ನು ಮರೆಯುವ ಸಮಯ ದೂರವಿಲ್ಲ. ದೇವರನ್ನು ಮರೆತ ಮಕ್ಕಳು ಮುಂದಿನ ದಿನಗಳಲ್ಲಿ ತಂದೆ ತಾಯಿ ಬಂಧು ಬಳಗ ಎಲ್ಲರನ್ನೂ ಮರೆತರೆ ಅಚ್ಚರಿಯಿಲ್ಲ.
ಈ ಎಲ್ಲಾ ಸಂಘರ್ಷ ದ ನಡುವೆ ಕೆಟ್ಟ ಚಟಗಳಿಂದ ಮಕ್ಕಳನ್ನು ದೂರ ಇಡಬೇಕಾದರೆ ದೇವರ ನಾಮಸ್ಮರಣೆ ಒಂದೇ ದಾರಿ ಎಂಬ ಸಂಕಲ್ಪವನ್ನು ಮಾಡಿಕೊಂಡು ಆ ಹಿನ್ನೆಲೆಯಲ್ಲಿ ಶ್ರೀ ದೇವಿ ಭಜನಾ ಮಂದಿರ ಪೆರಾಜೆ ಇದರ ವತಿಯಿಂದ ಪೆರಾಜೆ ಗ್ರಾಮದ ಆಸಕ್ತ ಸಣ್ಣ ಮಕ್ಕಳಿಗಾಗಿ ಒಂದು ವಾರದ ಭಜನಾ ತರಬೇತಿ ಮಂದಿರದಲ್ಲಿ ನಡೆಯಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಭಜನಾ ಮಂಡಳಿ ಆಧ್ಯಕ್ಷ ಯತಿರಾಜ್ ಮಿತ್ತ ಪೆರಾಜೆ ತಿಳಿಸಿದ್ದಾರೆ.
ಅಕ್ಟೋಬರ್ 31 ಶನಿವಾರದಿಂದ ನ. 07 ವರೆಗೆ ಪ್ರತಿದಿನ ಸಂಜೆ 7 ಗಂಟೆಯಿಂದ 8 ಗಂಟೆ ವರೆಗೆ ಭಜನಾ ತರಬೇತಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ಈ ತರಬೇತಿ ಶಿಬಿರಕ್ಕೆ ಕಳುಹಿಸಿ ಕೊಡಬೇಕಾಗಿ ವಿನಂತಿಯನ್ನು ಶ್ರೀದೇವಿ ಭಜನಾಮಂದಿರದ ಪರವಾಗಿ ಅವರು ಮನವಿ ಮಾಡಿಕೊಂಡಿದ್ದಾರೆ.
