ಬಂಟ್ವಾಳ : ವರ್ಷಂಪ್ರತಿ  ಅತ್ಯಂತ ಅದ್ದೂರಿಯಾಗಿ ಬಂಟ್ವಾಳ  ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ  ಶ್ರೀಶಾರದಮಹೋತ್ಸವಕ್ಕೆ ಕೋವಿಡ್- 19 ಹಿನ್ನಲೆಯಲ್ಲಿ ಸರಳವಾಗಿ, ಸಂಪ್ರದಾಯಬದ್ದವಾಗಿ  ಮಂಗಳವಾರ ರಾತ್ರಿ ಸಂಪನ್ನಗೊಂಡಿತು.ಐದು ದಿನಗಳ ಕಾಲ ಆರಾಧಿಸಲ್ಪಟ್ಟು,  ಪೂಜಾ ಮಂಟಪದಿಂದ ಹೊರಟ ಶ್ರೀಶಾರದಾ ಮಾತೆಯ ಶೋಭಾಯಾತ್ರೆಯು ನಗರ ಪ್ರದಕ್ಷಿಣೆಯ ಬದಲು ಕೇವಲ ರಥಬೀದಿಗಷ್ಠೆ ಸೀಮಿತಗೊಳಿಸಿ ದೇವಳದ ಮುಂಭಾಗ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

IMG_20201027_220901ಈ ಬಾರಿ ಸ್ತಬ್ದಚಿತ್ರ,ಟ್ಯಾಬ್ಲೋಗಳಿಗೆ ಅವಕಾಶವಿಲ್ಲದೆ ನವರಾತ್ರಿಯ ಹರಕೆ ರೂಪದ ನಾಲ್ಕು ಜತೆ ಹುಲಿಕುಣಿತಗಳು, ಬಡ್ಡಕಟ್ಟೆ ಯುವಕಮಂಡಲದ ಅನರ್ ಕಲಿ,ಬಂಟ್ವಾಳ ಉದಯಕುಮಾರ್ ಜೋಗಿಯ ಪ್ರೇತ ಸಹಿತ ಬೆರಳೆಣಿಕೆ ವೇಷಧಾರಿಗಳು ಶೋಭಾಯಾತ್ರೆಗೆ ಮೆರಗು ನೀಡಿದರು.

IMG_20201028_002504ಪ್ರತಿವರ್ಷ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ವೇಳೆ ಬಂಟ್ವಾಳ ಮಾತ್ರವಲ್ಲ ವಿವಿಧ ಭಾಗದಿಂದ ಜನಸ್ತೋಮವೇ ಸೇರುತ್ತಿದ್ದರು.ಆದರೆ ಈ ಬಾರಿ ಬಂಟ್ವಾಳ ಸುತ್ತಮತ್ತಲಿನ ಜನರಷ್ಠೆ ಸೇರಿದ್ದರು. ದೇವಳದ ಮುಂಭಾಗ ಶಾರದಾ ಮಾತೆಯನ್ನು ಕೂರಿಸಿದ ಬಳಿಕ ಸಂಪ್ರದಾಯದಂತೆ ಹರಕೆ ಸೇವೆಯ ಹುಲಿವೇಷ,ಅನರ್ ಕಲಿಗಳ ಕುಣಿತಕ್ಕೆ ಅವಕಾಶ ನೀಡಲಾಯಿತು.ಮುಂಜಾನೆಯವರೆಗೆ ನಡೆಯುತ್ತಿದ್ದ ಶೋಭಾಯಾತ್ರೆ ಮಧ್ಯರಾತ್ರಿ 12 ಗಂಟೆಯ ವೇಳೆಗೆ ಶ್ರೀಶಾರದಾ ಮಾತೆಯ ಜಲಸ್ತಂಭನದೊಂದಿಗೆ ಶಾರದೋತ್ಸವಕ್ಕೆ ತೆರೆಬಿತ್ತು.

By suddi9

Leave a Reply

Your email address will not be published. Required fields are marked *