ಬಂಟ್ವಾಳ:ಸಜಿಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಶ್ರೀ ಗಣಪತಿ ದೇವರ ಗರ್ಭಗುಡಿ ಹಾಗೂ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುತ್ತು ಗೋಪುರಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಯಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಕೆ ಪ್ರಭಾಕರ್ ಭಟ್ ನೆರವೇರಿಸಿದರೆ‌.ಸಜೀಪ ಮಾಗಣೆಯ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಅವರು ಧಾರ್ಮಿಕ ವಿಧಿ-ವಿಧಾನಗಳನ್ನುಗೈದರು.IMG-20201022-WA0024

ವೆಂಕಟೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು  ವಾಸ್ತು ಶಾಸ್ತ್ರಜ್ಞ ಪ್ರಸಾದ್ ಮುನಿಯಂಗಳ,  ಶಿಲ್ಪಿ ಅಣ್ಣಪ್ಪಚಂದ್ರಯ್ಯ,  ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಜಿಲ್ಲಾ ಪಂಚಾಯಿತ್ ನ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಸಜೀಪಗುತ್ತು ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಮಾಜಿ ಮೊಕ್ತೇಸರ ಶಿವರಾಮ ಭಂಡಾರಿ, ದಿಶಾ ಎಲೆಕ್ಟ್ರಿಕಲ್ಸ್ ಗಣೇಶ್.ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಕೆ.ಟಿ. ಸುಧಾಕರ್ , ನಮಿತಾ ಕರ್ಕೇರ. ಪ್ರವೀಣ್ ಆಳ್ವ, ರಾಮಕೃಷ್ಣ ಭಟ್,ಗಣಪತಿಭಟ್  ಮೊದಲಾದವರು ಉಪಸ್ಥಿತರಿದ್ದರು. ವಸಂತ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು . ದೇವಸ್ಥಾನದ  ಶ್ರೀ ದೇವರ ಗರ್ಭಗುಡಿ ಮಾಡಿಗೆ ತಾಮ್ರದ ಹೊದಿಕೆಯನ್ನು  ಮುಂಬೈ ಉದ್ಯಮಿ ರವೀಂದ್ರ ಭಂಡಾರಿ ಅವರು ತಮ್ಮ ಮಾತೃಶ್ರೀ ಲೀಲಾವತಿ ಎo ಭಂಡಾರಿ ಸ್ಮರಣಾರ್ಥವಾಗಿ ಸೇವಾರೂಪದಲ್ಲಿ ನೀಡುವ ಹಾಗೂ ದೇವಸ್ಥಾನಕ್ಕೆ ವಿದ್ಯುತ್ಚಕ್ತಿಯ ಅಳವಡಿಕೆಯ ಸಂಪೂರ್ಣ ವೆಚ್ಚವನ್ನು ದಿಶಾ ಎಲೆಕ್ಟ್ರಿಕಲ್ಸ್ ಮಾಲೀಕ ಗಣೇಶ್ ಭರಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *