ಬಂಟ್ವಾಳ: ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಆಶಾಲತಾ ಎಸ್. ಸುವರ್ಣ ಮತ್ತು ಶ್ರೀನಿವಾಸ್ ಇನ್ಸಿಟ್ಯೂಟ್ ಆಫ್ ಕಾಮರ್ಸ್ ನ ಉಪನ್ಯಾಸಕಿ ಹರಿಣಾಕ್ಷಿ ಇವರು ಬರೆದ ‘ಆಧುನಿಕ ಬ್ಯಾಂಕ್ ನಿರ್ವಹಣೆ’ ಪಠ್ಯಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ ಪಿ. ಎಸ್ ಯಡಪಡಿತ್ತಾಯ ಬಿಡುಗಡೆಗೊಳಿಸಿದರು. 
ಈ ಪುಸ್ತಕಕ್ಕೆ ವಿದ್ಯಾರ್ಥಿಗಳಿಂದ ಹಾಗೂ ಉಪನ್ಯಾಸಕರಿಂದ ಉತ್ತಮ ಪ್ರತಿಕ್ರಿಯೆ ಬರಲಿ ಎಂದು ಆಶಿಸಿದರು. ಉಪಕುಲಪತಿಗಳ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕದ ಲೇಖಕರು ಮತ್ತು ಹಿರಿಯ ಸಹ ಪ್ರಾಧ್ಯಾಪಕರಾದ ಡಾ.ಉಮ್ಮಪ್ಪ ಪೂಜಾರಿಯವರು ಉಪಸ್ಥಿತರಿದ್ದರು. ಈ ಪುಸ್ತಕವು ಮಂಗಳೂರು ವಿಶ್ವವಿದ್ಯಾನಿಯಲಯದ ದ್ವಿತಿಯ ಬಿಕಾಂ ನೂತನ ಚಾಯ್ಸ್ ಬೆಸ್ಡ್ ಕ್ರೆಡಿಟ್ ಸಿಸ್ಟಂ ಪಠ್ಯಕ್ರಮಕ್ಕೆ ಅನುಗುಣವಾಗಿ ರಸಲ್ಪಟ್ಟಿದ್ದು ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
