ಕೋಲಾರ: ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ಜಿಲ್ಲಾಧಿಕಾರಿ ಸಿ.ಸತ್ಯಭಾಮ ರವರು ಮತಗಟ್ಟೆಗಳಿಗೆ ಬೇಟಿ ನೀಡಿ ಪರಿಶೀಲಿಸಿದರು. ಬೆಳಗ್ಗೆ 11 ಗಂಟೆಯಿಂದ ರಾಯಲ್ಪಾಡು, ಲಕ್ಷ್ಮೀಸಾಗರ, ರೋಣೂರು, ಯಲ್ದೂರು, ದುಗ್ಗಸಂದ್ರ, ಮುಳಬಾಗಿಲು ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಮತಗಟ್ಟೆಗಳನ್ನು ಪರಿಶೀಲಿಸಿದ ಡಿ.ಸಿಯವರು ಕರೋನಾ ಹೆಚ್ಚಾಗುತ್ತಿರುವ ಸಲುವಾಗಿ ಸ್ವಚ್ಚತೆಯನ್ನು ಕಾಪಾಡಿ, ಅಂಗವಿಕಲ ಮತದಾರರಿಗೆ ವೀಲ್‍ಚೇರ್ ಮತ್ತು ಅವರು ಮತದಾನ ಮಾಡಲು ಒಬ್ಬ ವ್ಯಕ್ತಿ ಜೊತೆಯಲ್ಲಿ ಹೋಗಲು ನಿಯೋಜಿಸಬೇಕು.

dc news ಆ ಕಾರ್ಯಕ್ಕೆ ಸ್ಕೌಟ್ಸ್ ಅಂಡ್ ಗೈಡ್ಸ್ ಸಿಬ್ಬಂದಿಯನ್ನು ಬಳಸಿಕೊಳ್ಳುವಂತೆ ಸೂಚಿಸಿ, ಮತದಾನಕ್ಕೆ ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಸಲು ಕಡ್ಡಾಯವಾಗಿ ಸೂಚಿಸಿ ಮಾಸ್ಕ್‍ನ್ನು ಧರಿಸಲು ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಶೌಚಾಲಯಗಳನ್ನು ಶುದ್ದವಾಗಿಟ್ಟುಕೊಳ್ಳುವಂತೆ ಹೇಳಿದರು.

By suddi9

Leave a Reply

Your email address will not be published. Required fields are marked *