ಬಂಟ್ವಾಳ: ಗುರುವಾರವು ಬಂಟ್ವಾಳದಾದ್ಯಂತ ಮಳೆ ಮುಂದುವರಿದಿದ್ದು,ಎರಡು ಕಡೆಯಲ್ಲಿ ಮನೆ ಕುಸಿದು ಹಾನಿಯಾದ ಘಟನೆ ನಡೆದಿದೆ. ಮಳೆಯಿಂದಾಗಿ ತಾಲೂಕಿನಲ್ಲಿ ಸದ್ಯದ ಮಾಹಿತಿಯಂತೆ ಸುಮಾರು 6 ಲಕ್ಷ ರೂ.ನಷ್ಟವುಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ. ವೀರಕಂಬ ಗ್ರಾಮದ ಬೊಣ್ಯಕುಕ್ಕು ಎಂಬಲ್ಲಿ ಶ್ರೀಧರ್ ಬೆಲ್ಚಾಡ ರವರ ವಾಸದ ಮನೆಯು ಗುರುವಾರ ಬೆಳಿಗ್ಗೆ ಮಳೆಯಿಂದ ಸಂಪೂರ್ಣ ಕುಸಿದು ಬಿದ್ದಿದ್ದು. 
ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ,ಆದೇರೀತಿ ನರಿಕೊಂಬುಗ್ರಾಮದ ಮಾಣಿಮಜಲು ಎಂಬಲ್ಲಿ ರಾಮಚಂದ್ರ ಅವರ ಮನೆಯು ಭಾಗಶ: ಕುಸಿದಿದೆ.ಗುರುವಾರವು ಬೆಳಿಗ್ಗಿನಿಂದ ಮಧ್ಯಹ್ನದವರೆಗೆ ಸುರಿದಿದ್ದ ಮಳೆ ಬಳಿಕ ಕೊಂಚ ವಿರಾಮ ಪಡೆಯಿತು. ನೇತ್ರಾವತಿನದಿಯಲ್ಲುನೀರಿನ ಮಟ್ಟ ಇಳಿಮುಖವಾಗಿತ್ತು.
ಅಲ್ಯೂಮೀನಿಯಂ ಸಾಮಾಗ್ರಿ ತಯಾರಿಕಾ ಘಟಕಕ್ಕೆ ನೀರು :
ಪಾಣೆಮಂಗಳೂರು-ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಬುಧವಾರ ಕಾಣಿಸಿಕೊಂಡ ಕೃತಕ ನೆರೆಯಿಂದ ಶ್ರೀಹರಿ ಅಲ್ಯೂಮೀನಿಯಂ ಸಾಮಾಗ್ರಿ ತಯಾರಿಕಾ ಘಟಕಕ್ಕೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಲಕ್ಷಾಂತರ ಮೌಲ್ಯದ ಯಂತ್ರೋಪಕರಣ ಮತ್ತು ವಿದ್ಯುತ್ ಸಾಮಾಗ್ರಿಗೆ ಕೆಸರು ನೀರು ನುಗ್ಗಿ ಹಾನಿಗೀಡಾಗಿದೆ. ಸ್ಥಳೀಯ ಕಟ್ಟಡ ಮಾಲೀಕರೊಬ್ಬರು ಹೆದ್ದಾರಿ ಬದಿ ತೋಡಿಗೆ ಅಕ್ರಮವಾಗಿ ಮಣ್ಣು ತುಂಬಿ ಸರಕಾರಿ ಜಮೀನು ಅತಿಕ್ರಮಣಗೊಳಿಸಿದ ಪರಿಣಾಮ ಕೃತಕ ನೆರೆ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಯಂತ್ರೋಪಕರಣ ಹಾನಿಗೀಡಾದ ಸಂಸ್ಥೆ ಮಾಲೀಕ ನವೀನ್ ಕೋಟ್ಯಾನ್ ಅವರು ನರಿಕೊಂಬು ಗ್ರಾಮ ಪಂಚಾಯಿತ್ ಸಹಿತ ಹೆದ್ದಾರಿ ಇಲಾಖೆ ಮತ್ತು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಹೆದ್ದಾರಿ ಇಲಾಖೆ ಎಂಜಿನಿಯರ್ ಮಾಯಾಂಕ್ ಮಿಶ್ರಾ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ರಸ್ತೆ ಅತಿಕ್ರಮಣ ಬಗ್ಗೆ ಪರಿಶೀಲನೆ ನಡೆಸಿದ್ದು, ಬಳಿಕ ಹಿಟಾಚಿ ಮೂಲಕ ಮಣ್ಣು ತೆರವುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
