ಮಂಗಳೂರು: ವಿದ್ಯಾಥರ್ಿನಿ ಅಕ್ಷತಾ ಸಾವು ಮತ್ತು ಆಕೆಯ ಪ್ರಿಯಕರ ಮದನ್ ನಾಪತ್ತೆ ಪ್ರಕರಣ ನಡೆದು ಒಂದು ವರ್ಷವಾಗುತ್ತಾ ಬಂದರೂ, ನಾಪತ್ತೆಯಾದ ಮದನ್ ಎಲ್ಲಿದ್ದಾನೆ, ಅಕ್ಷತಾ ಸಾವಿಗೆ ಕಾರಣವೇನು ಎಂಬುವುದನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಯಾಕೆಂದರೆ ಅಕ್ಷತಳದ್ದು ಕೊಲೆಯೋ, ಆತ್ಮಹತ್ಯೆಯೋ ಎಂಬ ಸಂಶಯ ಇಂದಿಗೂ ಇದೆ.
ಶವವಾಗಿ ಪತ್ತೆಯಾಗಿದ್ದಳು ಅಕ್ಷತಾ:


ಮಂಗಳೂರಿನ ಕಾರ್ಸ್ಟ್ರೀಟ್ ಸರಕಾರಿ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾಥರ್ಿನಿ ಅಕ್ಷತಾ ಕಾಲೇಜಿನಲ್ಲಿ ಸ್ಪೆಷಲ್ ಕ್ಲಾಸ್ ಇದೆ ಎಂದು ಹೇಳಿ ಕಳೆದ ವರ್ಷ2013ರ ಸೆ. 21 ರ ಶನಿವಾರ ಮನೆಯಿಂದ ಹೊರಟಿದ್ದಳು. ಹಾಗೆ ಹೊರಟು ಬಂದಿದ್ದ ಅಕ್ಷತಾ ಬಳಿಕ ಮನೆಗೆ ವಾಪಸಾಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸೆ. 24 ರಂದು ನಗರದ ಬೋಳಾರ ಮುಳಿಹಿತ್ಲು ಐಸ್ಪ್ಲಾಂಟ್ ಬಳಿ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಅಪರಿಚಿತ ಯುವತಿಯ ಕೊಳೆತ ಶವ ಪತ್ತೆಯಾಗಿದ್ದು, ಪಾಂಡೇಶ್ವರ ಪೊಲೀಸರು ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿದ್ದರು. ಮರುದಿನ ಇದು ಅಕ್ಷತಾ ಅವರ ಶವ ಎಂದು ಗುರುತಿಸಲಾಗಿತ್ತು.
ಆಕಸ್ಮಿಕವಾಗಿ ಜಾರಿಬಿದ್ದಳೇ?
ಅಕ್ಷತಾ ಮೃತದೇಹ ಪತ್ತೆಯಾದ ರೀತಿ ನೋಡಿದಾಗ ಆರಂಭದಲ್ಲಿ ಅತ್ಯಾಚಾರದ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ಪೋಸ್ಟ್ ಮಾರ್ಟಂ ವರದಿಯ ಪ್ರಕಾರ, ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ, ಆಕೆ ನೀರಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮದನ್ ಮತ್ತು ಆಕೆ ಮುಳಿಹಿತ್ಲುವಿನ ಬ್ಯಾಕ್ವಾಟರ್ ಪ್ರದೇಶಕ್ಕೆ ಆಗಾಗ ತೆರಳುತ್ತಿದ್ದು, ಘಟನೆ ನಡೆದ ದಿನವೂ ಅಲ್ಲಿಗೆ ಹೋಗಿರಬಹುದು, ಸಂಜೆಯ ವೇಳೆ ಅಲ್ಲಿಂದ ಹೊರಡುವಾಗ ಆಯತಪ್ಪಿ ಆಕಸ್ಮಿಕವಾಗಿ ನೀರಿಗೆ ಬಿದ್ದಿರಬಹುದು. ಈ ವೇಳೆ ಮದನ್ ಆಕೆಯನ್ನು ರಕ್ಷಿಸಲು ಮಾಡಿದ ಪ್ರಯತ್ನ ವಿಫಲವಾಗಿ ಅಂತಿಮ ಕ್ಷಣದಲ್ಲಿ ಆತ ಆಕೆಯನ್ನು ಬಿಟ್ಟು ಕಾಲಿಗೆ ಬುದ್ಧಿ ಹೇಳಿರಬಹುದೇ? ಎಂಬ ಸಂಶಯ ಇಂದಿಗೂ ಕಾಡುತ್ತಿದೆ.
ಅಕ್ಷತಾ ನಾಪತ್ತೆಯಾದಂದೇ ಮದನ್ ನಾಪತ್ತೆಯಾಗಿದ್ದ:
ಆಕೆಯ ಪ್ರಿಯಕರ ಅದೇ ಕಾಲೇಜಿನ ಅದೇ ತರಗತಿ ವಿದ್ಯಾಥರ್ಿ ಮಂಜೇಶ್ವರದ ಮದನ್ ಸೆ. 21 ರಂದು ಕಾಲೇಜಿಗೆ ರಜೆ ಇದ್ದರೂ ಸೋಮವಾರ ನಡೆಯುವ ಪರೀಕ್ಷೆ ನಿಮಿತ್ತ ಅಸೈನ್ಮೆಂಟ್ ಇದೆ ಎಂದು ಹೇಳಿ ಆತ ಮನೆಯಿಂದ ಹೊರಟವನ ಪತ್ತೆ ಇಂದಿಗೂ ಆಗಿಲ್ಲ. ಮದನ್ ಅಕ್ಷತಾ ಜೊತೆ ನೀರಿಗೆ ಬಿದ್ದು ಕೊಚ್ಚಿ ಹೋಗಿ ಮೃತಪಟ್ಟಿಬಹುದೇ? ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಸಂಶಯ ಕಾಡಲಾರಂಭಿಸಿದೆ.
ಮೊಬೈಲ್ ಲೊಕೇಶನ್ ಸಚರ್್:
ನಾಪತ್ತೆಯಾದ ಮದನ್ ಜೀವಂತವಾಗಿ ಅಥವಾ ನಿಜರ್ೀವವಾಗಿ ಪತ್ತೆಯಾದರೆ ಪ್ರಕರಣವನ್ನು ಬೇಧಿಸಬಹದೆಂದು ಭಾವಿಸಿದ್ದ ಪೊಲೀಸರು ಮದನ್ನ ಮೊಬೈಲ್ ಫೋನ್ ನಂಬ್ರವನ್ನು ಕೇಂದ್ರೀಕರಿಸಿ ಬಹಳಷ್ಟು ತನಿಖೆ ನಡೆಸಿದ್ದಾರೆ. ಮಂಜೇಶ್ವರದಲ್ಲಿ ನೆಹರು ಯುವ ಕೇಂದ್ರದ ಸದಸ್ಯನಾಗಿದ್ದ ಮದನ್ ಬೇರೆ ಯಾವುದೇ ಸಂಘಟನೆಯ ಜತೆ ಗುರುತಿಸಿ ಕೊಂಡವನಲ್ಲ. ಈ ಸಂಘಟನೆಯ ಜತೆಗೆ ಮತ್ತು ಉಳಿದಂತೆ ತಂದೆ ಬಾಬು ಭಂಡಾರಿ ನಡೆಸುತ್ತಿರುವ ಸೆಲೂನ್ನಲ್ಲಿ ಸಹಕರಿಸುತ್ತಿದ್ದ ಎಂಬಿಷ್ಟು ಮಾಹಿತಿ ಹೊರತು ಪಡಿಸಿ ಮದನ್ ಬಗ್ಗೆ ಬೇರಾವುದೇ ವಿವರ ಪೊಲೀಸರಿಗೆ ಲಭ್ಯವಾಗಿಲ್ಲ. ಸೆ. 21 ರಂದು ಮದನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಆ ಬಳಿಕ ಅದು ಚಲಾವಣೆಗೆ ಬಂದಿಲ್ಲ. ಆತನ ಮೊಬೈಲ್ಗೆ ಬಂದ ಕರೆಗಳು ಮತ್ತು ಹೋದ ಕರೆಗಳ ತಪಾಸಣೆ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ.
ಮದನ್ನ ಪೋಷಕರು ತಮ್ಮ ಮಗ ಸಾವನ್ನಪ್ಪಿದ್ದಾನೆ ಹಾಗೂ ಆತನ ಮೃತ ದೇಹ ಅಕ್ಷತಾ ಮೃತದೇಹ ಪತ್ತೆಯಾದ ಸ್ಥಳದಲ್ಲಿಯೇ ಸನಿಹ ಇದೆ ಎಂಬುದಾಗಿ ಜ್ಯೋತಿಷಿಯೊಬ್ಬರು ನೀಡಿದ ಸೂಚನೆಯ ಮೇರೆಗೆ ಮುಳಿಹಿತ್ಲು ಐಸ್ಪ್ಲಾಂಟ್ ಬಳಿಗೆ ತೆರಳಿ ಹತ್ತು ಹಲವು ಕಡೆ ಗುಂಡಿ ತೋಡಿ ಮದನ್ ಮೃತ ದೇಹಕ್ಕಾಗಿ ಶೋಧ ನಡೆಸಿದ್ದರೂ ಯಾವುದೇ ಸುಳಿವು ದೊರಕಿಲ್ಲ.
ಅಕ್ಷತಾ ನಿಗೂಢ ಸಾವು ಪ್ರಕರಣದ ನಿಗೂಢತೆ ನಯಲಾಗಬೇಕೆಂದು ಸೆ. 27 ರಂದು ವಿದ್ಯಾಥರ್ಿಗಳಿಂದ ಬೃಹತ್ ಪ್ರತಿಭಟನೆ, ಕಾಲೇಜ್ ಬಂದ್ ನಡೆದಿತ್ತು. ಸೆ. 29 ರಂದು ಮಂಗಳೂರಿಗೆ ಭೇಟಿ ನೀಡಿದ್ದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಕ್ಷತಾ ಪೋಷಕರು ಮನವಿಯನ್ನು ಸಲ್ಲಿಸಿದ್ದರು. ಅ. 2 ರಂದು ಅಡ್ಯಾರ್ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಲಾಗಿತ್ತು. ಪ್ರಕರಣದ ನಿಗೂಢತೆಯನ್ನು ಬೇಧಿಸುವಂತೆ ವಿವಿಧ ಸಂಘಟನೆಗಳಿಂದಲೂ ಪೊಲೀಸರ ಮೇಲೆ ಒತ್ತಡ ಬಂದಿತ್ತು. ಆದರೂ ನಿಗೂಢತೆ ಬಯಲಾಗಿಲ್ಲ.
ಮದನ್ ಮತ್ತು ಅಕ್ಷತಾ ಒಂದೇ ತರಗತಿಯಲ್ಲಿ ಕಲಿಯುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಕಾರಣ ಪ್ರೇಮಿಗಳೂ ಆಗಿದ್ದರು. ಸೆ. 21 ರಂದು ಕಾಲೇಜಿಗೆ ರಜೆಯಾಗಿದ್ದರೂ ಇಬ್ಬರೂ ಮನೆ ಮಂದಿಯಲ್ಲಿ ಬೇರೆ ಬೇರೆ ನೆಪ ಹೇಳಿ ಮನೆಯಿಂದ ಹೊರಟು ಬಂದಿದ್ದಾರೆ. ಆದರೆ ಅವರು ಎಲ್ಲೆಲ್ಲಿಗೆ ಹೋಗಿದ್ದರು ಎಂಬ ವಿಷಯ ತಿಳಿದಿಲ್ಲ. ಅಕ್ಷತಾ ಸಾವು ಹೇಗೆ ಸಂಭವಿಸಿತು, ಮದನ್ ಎಲ್ಲಿದ್ದಾನೆ ಎಂಬ ಪ್ರಶ್ನೆಗಳಿಗೆ ಉತ್ತರ ದೊರಕಿಲ್ಲ. ಆಕೆಯ ಸಾವು ಮತ್ತು ಆತನ ನಾಪತ್ತೆ ಪ್ರಕರಣದ ಸುತ್ತ ಹತ್ತು ಹಲವು ಸಂಶಯಗಳು ಹುಟ್ಟಿಕೊಂಡಿದ್ದರೂ ಯಾವುದಕ್ಕೂ ಉತ್ತರ ಸಿಕ್ಕಿಲ್ಲ.
ಮದನ್ ಸುಳಿವು ಸಿಗದೆ ಅಕ್ಷತಾ ಸಾವಿಗೆ ಕಾರಣ ಕಂಡುಕೊಳ್ಳಲು ಸಾಧ್ಯವಾಗದು ಎನ್ನುವುದು ಪೊಲೀಸರ ಭಾವನೆ.ಎರಡೂ ವಿಷಯಗಳು ಪರಸ್ಪರ ಥಳಕು ಹಾಕಿಕೊಂಡಿರುವುದರಿಂದ ಈ ಪ್ರಕರಣ ತನ್ನ ನಿಗೂಢತೆಯನ್ನು ಬಿಟ್ಟು ಕೊಡುತ್ತಿಲ್ಲ. ಆದ್ದರಿಂದ ಪೊಲೀಸರಿಗೆ ಇದೊಂದು ಯಕ್ಷ ಪ್ರಶ್ನೆಯಾಗಿದೆ.
ಅಕ್ಷತಾ ಸಾವು ಪ್ರಕರಣ ಕುರಿತಂತೆ ವಿದ್ಯಾಥರ್ಿ ಸಂಘಟನೆಗಳು ಪ್ರಾರಂಭದಲ್ಲಿ ಹೋರಾಟ ನಡೆಸಿದ್ದರೂ ಕ್ರಮೇಣ ಎಲ್ಲರಿಗೂ ಇದು ಮರೆತೇ ಹೋದಂತಿದೆ. ವಿದ್ಯಾಥರ್ಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಷ್ಟು ಗಂಭೀರತೆಯನ್ನು ಇದು ಪಡೆದುಕೊಂಡಿಲ್ಲ. ವಿದ್ಯಾಥರ್ಿ ಸಂಘಟನೆಗಳು ಹಾಗೂ ಸಂಘಟನೆಗಳು ಮತ್ತೊಂದು ಸುತ್ತಿನ ಹೋರಾಟ ನಡೆಸುವ ಅವಶ್ಯಕತೆ ಇದೆ.
